ನಿನಗೆಂದೆ ಬರೆದಿಟ್ಟ ನೂರೆಂಟು ಕವಿತೆಗಳು .
- ಮತ್ತೆ ಅರಳಲಾರೆನು, ಮಸಣದೂರ ಕೆರೆಯಲಿ.
ಮೈಲುಗಲ್ಲೆ ನೆಡೆದು, ದಿಕ್ಕು ತಪ್ಪಿತೆ ?
ಕೂಗಲಾರದ ಕೊರಳ ಧನಿಯು ಕೇಳಿತೆ ?
ಬೆಳಕಿನಡಿಯ ಬೇರು ಕತ್ತಲಲ್ಲವೆ ?
ಕಾಂತಿ ತೊರೆದ ಹೂವ್ವು ನಾನು
ಮಸಣದೂರ ಕೆರೆಯಲಿ ||
ಬಿದಿಗೆ ಚಂದ್ರ ಮತ್ತೆ ಅಳಲಿ,
ಬೆಳಕು ಚೆಲ್ಲಿ ಹೋಗಲಿ
ಹಸಿದ ಮನಕೆ ಒಲವಿನೂಟ
ನೀಡೊ ಕೈಗೆ ಬೇಡಿಯೋ !
ಮಸಣದೂರಲಿ, ಮಸಣದೂರಲಿ ..
ಮೋಡದೊಳಗೆ ಬೆವತ ಹನಿಯು,
ಭೂಮಿ ಮೊಗವ ವರೆಸಿದೆ,
ರಶ್ಮಿ ಕಿರಣ ಸೋಕಿ,
ಧರೆಯ ದುಗುಡವೆಂದು ಆರದೆ .
ಪರಿತಪಿಸುವ ಮನಗಳಿಗೆ
ಮೋಸದ ಬರೆಯು,
ಉರಿವ ಜ್ವಾಲಾಮುಖಿಯು
ಅವರೆದೆಗೆ ಹರಿದು.
ಕಾಂತಿ ತೊರೆದ ಹೂವ್ವು ನಾನು
ಮಸಣದೂರ ಕೆರೆಯಲಿ ||
ಅಂಶಿನ 17082018
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!