ಈ ಹಸಿರಿನ ಚೆಂದ 

ಆ ಹೂವಿನ ಅಂದ 

ಮಾಡುತ್ತಿದೆ ನನ್ನ 

ಕವಿಯನ್ನಾಗಿಯೂ 

ಪ್ರೇಮ ಕವಿಯನ್ನಾಗಿಯೂ 

 

ಈ ಮಳೆ ಹನಿ ಸೋಕುತ

ಆ ತಂಗಾಳಿ ಬೀಸುತ 

ಹೊಸದಾದ ಸ್ವರವನಿಂದು

ನುಡಿಸಿ ಹೋಯಿತು 

ಮನದಲ್ಲಿ ನುಡಿಸಿ ಹೋಯಿತು 

 

ಮುಂಜಾನೆ ಮಂಜು ತುಂಬಿ 

ಬೆಳ್ಮೋಡ ಒಂದುಗೂಡಿ 

ಕಟ್ಟಿದವು ಒಂದು ಚಪ್ಪರವನ್ನು 

ತಡೆದು ಸೂರ್ಯನ ರಶ್ಮಿಯನ್ನು 

 

ಚಂದಿರನಿಲ್ಲದ ರಾತ್ರಿಯಲ್ಲಿ 

ಈ ದಟ್ಟ ಕಾಡಿನಲ್ಲಿ 

ಬೆಳಗುತ್ತಿದೆ ಮಿಂಚುಳವು ದೀಪವನ್ನು 

ತೋರಲು ಸಾಗುವ ದಾರಿಯನ್ನು 

 

ಆ ಜಲಧಾರೆ ಜೋಗುಳಕೆ 

ಈ ಮೌನದ ಕನವರಿಕೆ 

ಪಡೆಯುತ್ತಿರುವೆ ನಾನು ವಿಶ್ರಾಂತಿಯನ್ನು 

ಹಾಗೆ ಅಪ್ಪಿಕೊಂಡೇ ನಿದ್ರಾದೇವಿಯನ್ನು

 

- ಕೆಕೆ (ಕೀರ್ತನ್ ಕೆ)