ಹಿಂದುಸ್ತಾನ ಅಂದು ಬ್ರಿಟಿಷರ ಕಪಿಮುಷ್ಠಿಯೊಳಗೆ 

ಹಿಂದುಸ್ತಾನ ಇಂದು  ಭ್ರಷ್ಟರ ಬಿಗಿಮುಷ್ಠಿಯೊಳಗೆ 

 

ಅಂದು ನಡೆಯಿತು ಸ್ವಾತಂತ್ರ್ಯಕ್ಕಾಗಿ ಬಡಿದಾಟ  

ಇಂದು ನಡೆಯುತ್ತಿದೆ ಬದುಕಿಗಾಗಿ  ಚೀರಾಟ 

 

ಅಂದು ಇದ್ದರು ದೇಶಭಕ್ತರು 

ಇಂದು ಇರುವರು ದೇಶಭಕ್ಷಕರು 

 

ಅಂದು ತಾಯಿ ನೆಲದ ರಕ್ಷಣೆಗಾಗಿ ಹೋರಾಟ 

ಇಂದು ತಾಯಿ ನೆಲದ  ಭಕ್ಷಣೆಗಾಗಿ ಕಚ್ಚಾಟ 

 

ಅಂದು ನಾಡನ್ನು ಉಳಿಸಲು ಒಟ್ಟಿಗೆ ಹೋರಾಡುವ ಕೂಗು 

ಇಂದು ನಾಡಿನ ಸಂಪತ್ತನ್ನೆಲ್ಲಾ ಒಟ್ಟಿಗೆ ಕಬಳಿಸುವ ಹಿಗ್ಗು