ಅರೆ ಅರೆ ಅದೆಂತಾ ಅಲೆ....,.
ಅರೆ ಅರೆ ಅದೆಂತಾ ಅಲೆ !!!! ಬೊಬ್ಬಿರಿದು ಬಂದು ಸದ್ದಿಲ್ಲದೆ ದಡಕೆ ಮುದ್ದಿಕ್ಕಿ ಮೆಲ್ಲ ನಡೆದ ಕಲೆ ! !! ಭರ ಭರನೆ ಬರುವ ಬಿರ ಬಿರನೆ ನಡೆಯ ನಿನ್ನ ನೂಪುರ ಅದೆಂಥಾ ವಿಸ್ಮಯ!!! ಕಿನ್ನರಿಯಂತೆ ಬಳುಕಿ ಕಿನಾರೆಯ ಸವರಿ ಸಾಗರವ ತುಳುಕಿಸಿ ಸರಿವ ನಿನ್ನ ಆ ಪರಿ!!! ಸಲ ಸಲಕು ನಿನ್ನ ಬಲ ಪ್ರಬಲ ಹಗಲಿರುಳೆನ್ನದೆ ಭೋರ್ಗರೆವ ಆ ನಿನ್ನ ರವ ವಾರೆವ್ಹಾ! !! ಸಾಗರದ ಆಗರವ ಸಾರಿಸಿ ಓರೆಕೋರೆ ನಿವಾರಿಸಿ ಬರುವ ಸಲಿಲದ ಸವಾರಿ ಬರೋಬರಿ !!! ರವಿ ಕಾಂತಿಯನು ಕೆಂಪಾಗಿಸಿ, ತಿಂಗಳನು ತಂಪಾಗಿಸಿ ಚ೦ಬೆಳಕಲಿ ಜಲಧಿಯ ಅಂಗಳದಿ ನಲಿದಾಡುವ ತರಂಗಿಣಿ ನೋಡುವೆ ಮನದಣಿ....—
——Rukku
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!