ಅಪ್ಪ.....
ಅಂದದ ಕೂಸಿನ ಕನಸಿನ ಕಂಗಳಿಗೆ ರಂಗನ್ನು ತುಂಬಿಸಿ ತ
ಪ್ಪನ್ನು ಒಪ್ಪವಾಗಿಸಿ ಬದುಕಿನ ಚಿತ್ರವನ್ನು ಚಂದಗೊಳಿಸುವ ಅಪ್ಪ
ಪಿಸುಮಾತಿನ ನಲ್ನುಡಿ ನಲಿವು ಗೆಲುವಿನ ಪ್ರೀತಿಯ
ತವರಿನ ತೇರನು ತಡೆಯಿಲ್ಲದೆ ನಡೆಸಿ ಒಲಿಸುವನು ಪಿತ
ಜತನದಲಿ ತನುಜ ತನುಜೆಯರನು ಕಾದು
ನಮಿಸಿ ರಮಿಸಿ ಜನಜನಿತವಾಗಿಸಿ ಕಾಣುವ
ಕನಸುಗಳ ಸಾಕಾರಗೊಳಿಸುವ ಯಜಮಾನ ಜನಕ
ತಂಗಾಳಿಯ ತಂಪಿನ ಮಮತೆಯನು ಹಿತವಾಗಿ
ದೆಸೆಯಾಗಿಸಿ ದುರಿತವನು ತರಿಯುವ ಧೀರ ತಂದೆ
——Rukku
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!