ಇರುಳ ಕನಸಿಗೆ ಹಗಲು ಒಲವ ಕವಿತೆಯ ಬರೆದೆಯಾ ನೀನು
ಕರುಳಬಳ್ಳಿಗೆ ಹೆರಿಗೆಯ ಮೊದಲು ಕುಲಾವಿಯ ಹೊಲಿದೆಯಾ ನೀನು ||
ಜೀವನ ಯಾನ ಪಾವನ ಆಗಲು ಸಹನೆ ಸಂಯಮ ಇರಬೇಕು
ಬೇವಿನ ಅಂಶವು ಸ್ವಾಸ್ತ್ಯದಸಾಧಕ
ಮರೆತು ನಡೆದೆಯಾ ನೀನು||
ಕಲ್ಪನೆಗಿಂತ ವಾಸ್ತವ ಬದುಕು ತುಂಬಾ ಮುಖ್ಯ ಅರಿವಿರಲಿ
ವಂಶ ಬೆಳಗುವ ಬರದಲಿ ಸಾಗುತ
ಮತಿಯಲಿ ತಪ್ಪಿದೆಯಾ ನೀನು
ಬಂಜೆಯ ಪಟ್ಟವ ಅಳಿಯಲು ಸ್ತ್ರೀಗೆ ಸಂತಾನ ಭಾಗ್ಯ ಅನಿವಾರ್ಯ
ಗಂಡೇ ಬೇಕು ಎನ್ನುತ ಮನದಲಿ
ಹಠವನು ಮಾಡಿದೆಯಾ ನೀನು
ಗಂಡೋ ಹೆಣ್ಣೋ ಮನೆಯಲಿ ಕಂದನ ಚಂದದ ನಗುವು ತೇಲಲಿ
ಗಜಗಾಮಿನಿ ಬಿಜಲಿ ಪ್ರೇಮವಾಣಿಗೆ
ಸಮ್ಮತಿ ತೋರಿದೆಯಾ ನೀನು ||
-*ಶ್ರೀ ಈರಪ್ಪ ಬಿಜಲಿ*
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!