ನಿನ್ನ ರೂಪವು ನನಗೆ ಕರೆದು ತೋರಿದೆ ಏಕೆ
ಬರುವೆನೆನ್ನುತ ನಾನು ಬಳಿಗೆ ಬಂದರೆ ಸಾಕೆ||ಪ||
ಒಲವ ನಗೆಯಲಿ ಮಿಂದು ಚೆಲುವ ಚೆನ್ನಿಕೆಯಾಗಿ
ನಲಿವ ಮನದೊಳು ಬಂದು ಗೆಲುತ ಹೃದಯವನಲ್ಲಿ
ಸಲುಗೆಯಲ್ಲಿಯೆ ಸ್ಪರ್ಶ ಪಡೆದು ಸಾಗುವೆಯಲ್ಲೆ||೧||
ಪ್ರೇಮ ಗಂಗೆಯ ಹರಿಸಿ ಎದೆಯ ಕದವನು ತೆರೆದೆ
ರೋಮರೋಮದಿ ನೀನು ಭಾವ ನೌಕೆಯ ಹರಿಸಿ
ಶಾಮ ಕೋಮಲ ರಾಣಿ ಬಳಿಗೆ ಬಾರೆಯ ಸರಸಿ||೨||
ವಿರಹದುರಿಯಲಿ ಮೌನ ತೇರು ಏರಿದೆ ಲಲನೆ
ಬೆರಗು ತೋರುತ ಹೃದಯ ಕದವ ಮುಚ್ಚಿದೆಯೇಕೆ
ಕರಗಿಹೋಗುವೆ ಸುಮವೆ ಮಳೆಯ ಹನಿಯಲಿ ನಾನು||೩||
-*ಶಂಕರಾನಂದ ಹೆಬ್ಬಾಳ*
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!