ಭಾವವುಕ್ಕಿ ಕನವರುತಿದೆ
ಭೃಂಗದ ಶೃಂಗಾರಕೆ|
ಕಾಡು ಮೇಡು ಬನವ ಸುತ್ತೊ
ಜೇನ ಮನದ ಕಾಯಕೆ||
ತತ್ತಿಯೊಳಗ ಕೋಳಿ ಮರಿಯು
ಜಗದ ಕನಸ ಕಟ್ಟಿದೆ|
ಬಸುರು ಹೊತ್ತ ಕಾಮಧೇನು
ಜಗಕೆ ಕನಸ ಬಿತ್ತಿದೆ||
ಹರೆಯ ಉಕ್ಕೊ ನೀರೆ ಹೃದಯ
ಕೊಳಲನಾದ ಬಯಸಿದೆ|
ವಿರಹದುರಿಗೆ ಹೃದಯ ಕರಗಿ
ಕನಸ ಪೊರೆಯು ಕಳಚಿದೆ||
ಹರಿವ ನದಿಯ ಒಡಲ ಬಯಕೆ
ಸಾಗರದಲಿ ಬೆರೆತಿದೆ|
ಕನಸ ಹೊದ್ದ ಭುವಿಯ ಮೊಗಕೆ
ರವಿಯ ಕಿರಣ ಸೋಕಿದೆ||
-ಜನಾರ್ದನ ದುರ್ಗ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!