ಉಂಡೆ ಉಂಡೆ ಲಾಡುಂಡೆ

ನಿನ್ನನು ತಿನ್ನಲು ನಾ ಬಂದೆ

ರುಚಿಯಲ್ಲದು ಅತಿ ಸೊಗಸು

ಆಯಿತು ತಿನ್ನಲು ಮನಸು.

 

ಗರಿಗರಿ ಕಾಳದು ಘಮ್ಮನೆ

ಸಕ್ಕರೆ ಪಾಕದೊಳು ಬಿಮ್ಮನೆ

ಪಾಕವ ಹೀರಿ ಫಳಫಳನೆ

ನೋಡುತ ಕುಳಿತೆವು ಸುಮ್ಮನೆ.

 

ಸೇರಿತು ಅದಕೆ ಪುಡಿ ಏಲಕ್ಕಿ

ಗೋಡಂಬಿ, ದ್ರಾಕ್ಷಿ ಲವಂಗವು

ರುಚಿ,ಘಮಕ್ಕಲ್ಲಿ ಬೆರೆಸಿದರು

ಸೊಬಗಿನ ಉಂಡೆಯ ಕಟ್ಟಿದರು.

 

ನಾಲಿಗೆಗಲ್ಲಿ ತಿನ್ನುವ ಬಯಕೆ

ಗಬಗಬ ನುಂಗಲು ಒಂದೇ ಸಲಕೆ

ಬಾಯದು ಉಬ್ಬಿ ಗಂಟಲು ಕಟ್ಟಿ

ಬಾಯಿಂದ ಜಾರಿತು ಲಾಡುಂಡೆ.!

    

-ವೀಣಾ ಕೃಷ್ಣಮೂರ್ತಿ ದಾವಣಗೆರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ