ದೂರದಲಿ ಕಾಣುವುದು ಸುಖಗಳ ದಿನಗಳವು
ದಾರಿಯದು ಬೇಕು ಗುರಿಯ ತಲುಪಲು
ಅವಸರದಿ ಧುಮುಕಿದರೆ ಚಡಪಡಿಸಿ ಆಸೆಗೆ
ಅಡ್ಡದಾರಿ ಹಿಡಿದರೆ ಒಳಿತಲ್ಲ ಮನುಜ..
ಕನಸುಗಳು ಮನಸನ್ನು ಕಾಡುತಲಿ ಇರುತಿರೆ
ನನಸಾಗಿಸೋ ತುಡಿತ ಹೆಚ್ಚಲು ನಿನ್ನೊಳಗೆ
ಅವಸರವು ಅಪಘಾತ ಮಾತನ್ನು ಮರೆತರೆ
ಚಿಂತೆಯೇ ಜೀವನವು ಕೇಳು ಮನುಜ..
ಸ್ವಾರ್ಥದಾ ಸಾಧನೆಗೆ ಹೋಗದಿರು ನೀನು
ಸ್ವಾಭಿಮಾನವ ಮಾರದೇ ನಡೀಬೇಕು ಏನು
ಸ್ವಂತಿಕೆಯ ಮರೆತು ಸಂಪತ್ತ ಗಳಿಸಿದರೆ
ಹಂಗಿನಾ ಅಗುಳದು ಒಗ್ಗದು ಮನುಜ..
ನೀತಿಯದು ಜೊತೆಗಿರಲಿ ಬಾಳಿಗೆ ದಿಕ್ಸೂಚಿ
ನಡೆಸುವುದು ನಮ್ಮನ್ನು ಸನ್ಮಾರ್ಗದಿ ಎಂದೂ
ಬದುಕದಿರು ಅನ್ಯರ ಸಂಪತ್ತ ದೋಚಿ
ಮುಳುವಾತು ಬಾಳಿಗೆ ಕೇಳು ಮನುಜ..
ನಂಬಿಕೆಯೇ ಭೂಷಣವು ಎಲ್ಲರಲಿ ಅನುದಿನವೂ
ಮೋಸವದು ತರವಲ್ಲ ಸುಜನರ ಬಾಳಿಗೆ
ಕಷ್ಟದಲಿ ಜೊತೆಯಾದ ಜನರನ್ನು ಮರೆಯದೆ
ನೆನೆನೆನೆದು ಬದುಕು ನೀ ಕೇಳು ಮನುಜ..
-‘ಮೌನ ರಾಗ’ ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!