ರಾಧೆಯು ಸೋತಳು ಕೊಳಲಿನ ಗಾನಕೆ

ಜಾರಿಹೋದಳು ಪ್ರೇಮ ಲೋಕಕೆ

 

ಓಡಿ ಬಂದಳು  ಮುರಳಿಯ ನಾದಕೆ

ಬೇಡಿ ಬಂದಳು  ಕೃಷ್ಣನ ಪ್ರೀತಿಗೆ

ಮನಸೋತಳು  ಪಿಳ್ಳಂ ಗೋವಿಯ 

ಪರಿ ಪರಿ ಆಲಾಪಕೆ

 

ಕೃಷ್ಣನ  ಕಂಡಳು  ಬೃಂದಾವನದಲ್ಲಿ

ಕಂಡಳು ಕೃಷ್ಣನ ತುಳಸಿ ವನದಲ್ಲಿ

ಕಾದಳು ಕಾದಳು ಮುರಳಿಯ ಕರೆಗೆ

ಅವನ  ಒಲುಮೆಗೆ ಪ್ರೇಮದ ಪೂಜೆಗೆ

 

ಬೃಂದಾವನದಲ್ಲಿ  ಗೋವುಗಳ ನಡುವೆ

ಕೊಳಲನು  ಊದುತಾ  ಜಗವನೇ ಮರೆತ

ಮುರಳಿಯನರಸಿ  ಬಂದಳು ಅವಳು

ಮೋಹದ ಬಲೆಯಲಿ ತೇಲಿ ಹೋದಳು

 

-ಎಸ್. ನಾಗರತ್ನ ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ