ನಮ್ಮ ಭಾಷೆ ಕನ್ನಡ
ನಮ್ಮ ಮಣ್ಣು ಕನ್ನಡ
ನಮ್ಮ ಮನೆಯು ಕನ್ನಡ
ನಾವೆಲ್ಲರು ಕನ್ನಡಿಗರು
ಆಟ ಊಟ ಕನ್ನಡ
ಓಟ ಪಾಠ ಕನ್ನಡ
ಕೂಟ ನೋಟ ಕನ್ನಡ
ನಾವೆಲ್ಲರು ಕನ್ನಡಿಗರು
ಗಾಳಿ ಉಸಿರು ಕನ್ನಡ
ಹಸಿರು ಸೊಪ್ಪು ಕನ್ನಡ
ಹರಿವ ಜಲವು ಕನ್ನಡ
ನಾವೆಲ್ಲರು ಕನ್ನಡಿಗರು
ಉರಿವ ಜ್ಯೋತಿ ಕನ್ನಡ
ಬೆಳಕ ಪ್ರಭೆ ಕನ್ನಡ
ಮಮತೆ ಪ್ರೀತಿ ಕನ್ನಡ
ನಾವೆಲ್ಲರು ಕನ್ನಡಿಗರು
ಪ್ರಕೃತಿ ಮಾತೆ ಕನ್ನಡ
ಹರಿವ ರಕ್ತ ಕನ್ನಡ
ಓದು ಬರಹ ಕನ್ನಡ
ನಾವೆಲ್ಲರು ಕನ್ನಡಿಗರು
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!