ಮಾತಿನ ಬಾಣಗಳ ಸುರಿಸುತ್ತಿದ್ದ ಸುಂದರನೆ ಮರೆಯಾದೆಯಾ ಇಂದು

ನೀತಿಯ ಬೋಧನೆ ಸಾರುತ್ತಿದ್ದ ಚೆನ್ನಿಗನೆ ದೂರವಾದೆಯಾ ಇಂದು

 

ಯಕ್ಷಗಾನ ಲೋಕದಲಿ ವಿಜೃಂಭಿಸಿದ ಕುಂಬಳೆಯು ಅದ್ಭುತ  ಪ್ರತಿಭೆಯಲ್ಲವೇ

ಯಕ್ಷ ಕಿನ್ನರನಾಗಿ ಚೆಂಡೆ ಮದ್ದಳೆಗೆ ಹೆಜ್ಜೆ ಹಾಕುತ ತೆರಳಿದೆಯಾ ಇಂದು  

 

ಬಣ್ಣದ ಪ್ರಪಂಚದಲಿ ವಾಗ್ಮಿಯಾಗಿ ಪ್ರಖರ  ಸೂರ್ಯನಂತಿದ್ದು ಬೆಳಗಿದೆ

ಬಾಗುತ-ಬೀಗಿದ ವಾಕ್ ಚಾತುರ್ಯದ ಮೇರು ಪರ್ವತವಾದೆಯಾ ಇಂದು

 

ಮಧುಸೂದನ ಕಪಟ ನಾಟಕ ರಂಗದಲಿ ನುರಿತ ಕಲಾವಿದನು

ಭಗವಂತನ ಸನಿಹಕೆ ತೆರಳಲು ಚಿರನಿದ್ದೆಗೆ ಜಾರಿದೆಯಾ ಇಂದು

 

ನವರತ್ನದ ಪ್ರಭೆಯ ಚೆಲ್ಲಿದ ಬೆಲೆಬಾಳುವ ಮಾಣಿಕ್ಯದ ಹರಳಾಗಿದ್ದೆ

ಆತ್ಮವಿಶ್ವಾಸವ ಪೀಳಿಗೆಗೆ ದಾಟಿಸಿ ದೃಢತೆಯ ಇಟ್ಟಿಗೆ ಕಟ್ಟಿಸಿದೆಯಾ ಇಂದು

 

-ರತ್ನಾ ಕೆ ಭಟ್ ತಲಂಜೇರಿ