ಗರ್ಭಗುಡಿ
ಅಮ್ಮನ ಗರ್ಭ
ಕೂಸಿಗೆ ಗರ್ಭಗುಡಿ
ಒಲವೇ ಹೂವು
ಹಂಬಲವೇ ಹರಕೆ
ಹರಸಿದೆ ಕರವು.
***
ತ್ರಿಶಂಕು
ತ್ರಿಶಂಕು ಜೀವ
ಆ ದೇವನೂ ಕಾಯನು
ಸುಡುವ ನೋವು
ಕಾಲಗರ್ಭದ ಬೇರು
ಹೊಕ್ಕಿದೆ ಎದೆಯಾಳ.
***
ಕ್ಷಮಾ
ಕ್ಷಮಾಗುಣವು
ಬೆಳೆಯಲಿ ನಿನ್ನಲಿ
ಸ್ನೇಹ ಪ್ರೀತಿಯ
ನೀ ಹಂಚು ಸರ್ವರಲಿ
ದ್ವೇಷಗಳ ಮರೆಸಿ.
***
ಗೌರವ
ನೀರಿಗೆ ಬೆಲೆ
ಅದು ತೀರ್ಥವಾದಾಗ
ಕಲ್ಲಿಗೆ ಬೆಲೆ
ಅದು ಶಿಲ್ಪವಾದಾಗ
ಕೆಡುಕು ತೊಡೆದಾಗ.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!