ಯಾರಿಗೆ ಹೇಳುವಳಾಕೆ

ನೀವೇ ಕೇಳದ ಮೇಲೆ?

 

ಮನೆ ಬೆಳಗುವ ದೇವತೆಗೆ

ಅವಮಾನದ ಬೇಲಿ

ಹಾಕಿದರೆ? ||ಯಾ||

 

ಜೀವನಪೂರ್ತಿ ಸಂಬಳವಿಲ್ಲದೆ

ದುಡಿವ ಮಡದಿಗೆ ನಲ್ಮೆಯ

ಎರಡು ಮಾತನಾಡದಿದ್ದರೆ?||ಯಾ ||

 

ಸುಟ್ಟ ಗಾಯಗಳ ಮರೆತು

ಹಸಿವ ನೀಗಿಸುವವಳ ಕ್ಷೇಮ

ವಿಚಾರಿಸದಿದ್ದರೆ? ||ಯಾ ||

 

ಮಕ್ಕಳಡೆದು ಹರ್ಷ

ಹಂಚುವ ಮುಗ್ದೆಯ ನಗುವನ್ನು

ನೀವೇ ಕಿತ್ತರೆ? ||ಯಾ ||

 

ಹಡೆದವಳಿಗೆ ಹೊಡೆಯಲು

ಹೋದರೆ ಪಾಪ! ಹೇಗೆ

ಸಹಿಸಿಯಾಳು?||ಯಾ ||

 

ಅವಮಾನಗಳನ್ನೇ ನುಂಗಿದ

ಜೀವಕ್ಕೆ ಅಭಿಮಾನ

ತೋರದಿದ್ದರೆ? ||ಯಾ ||

 

ಒಮ್ಮೆ ಹಿಂದಿರುಗಿ ನೋಡಿ

ಎಲ್ಲ ಒತ್ತಡಗಳ ಮರೆತು

ಹಸನಾಗುವುದು ಜೀವ...

 

-ಸಹನ. ಆರ್. ಎಂ

ಚಿತ್ರ ಕೃಪೆ: ಇಂಟರ್ನೆಟ್ ತಾಣ