ಈ ಲೋಕವ ಕಂಡು ಸಂಭ್ರಮಿಸಲು
ನಿನ್ನ ಹುಟ್ಟು ಕಾರಣ
ಆದರೆ ಆಕಸ್ಮಿಕವಾಗಿ ಬರುವುದು
ವಿಶ್ವದಲ್ಲಿ ಈ ಮರಣ
ಜೀವಿಸುವಾಗ ಒಳಿತು ಮೇಳೈಸಿ
ನೀನು ಬದುಕಬೇಕು
ಜೀವನ ಸಾರ್ಥಕ್ಯ ಗಳಿಸಿಕೊಂಡು
ಆಯುಷ್ಯ ನಿರಂತರವಾಗಿರಬೇಕು
ಸಜ್ಜನಿಕೆಯ ಹಾದಿಯಲ್ಲಿರುವಾಗ
ಕಷ್ಟಗಳೆಲ್ಲ ಎಷ್ಟೋ ಸಹಜ!!??
ದುಷ್ಟತನಗಳು ಮೆರೆದಾಡುವಾಗ
ವೇಗದಿ ನಿಯಂತ್ರಿಸಬೇಕು ನಿಜ!
ಸತ್ತ ನಂತರದ ಸ್ವರ್ಗಕ್ಕೆ ಕಾಯದೆ
ಧರೆಯೇ ಸ್ವರ್ಗವಾಗಬೇಕು
ಶಿಕ್ಷೆ ನರಕಗಳ ಮರೆತು ನೀನು
ಭುವನದಲ್ಲಿ ಹಾಯಾಗಬೇಕು!
ಕ್ರೂರ ವರ್ತನೆಯು ಅಂತ್ಯವಾಗಲಿ
ಓ ಸರಿ ಇರುವ ಮನುಜರೇ
ಭುವಿಯಲಿ ನೈಜತೆಗೆ ಸಹಕರಿಸಿ
ಮುಗಿಯಲಿ ನೋವುಗಳ ಬರೆ
-ಎಂ.ಎ.ಮುಸ್ತಫಾ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!