ನೀನು ಯಾಕೆ ಪ್ರೀತಿಸುವೆ ಅವಳ
ಓ ಕೊಲೆಗಾರನೇ
ನಿನ್ನ ಅಡ್ಡ ಬುದ್ಧಿಗೆ ತಿರಸ್ಕರಿಸಿದರೆ
ಅವಳ ದೇಹವ ಕತ್ತರಿಸುವವನೇ!!?
ಪ್ರೀತಿ ಎಂದರೆ ದುರುಪಯೋಗವಲ್ಲ
ಸಂಬಂಧ ಮೌಲ್ಯಗಳ ಪ್ರದರ್ಶನ
ಪ್ರೇಮ ಎಂದರೆ ಕಾಮದಬ್ಬರವಲ್ಲ
ಮನುಷ್ಯ ನಿಕೃಷ್ಟತೆಯ ಬಂಧನ!!
ಮಾನವೀಯ ರೀತಿಗಳ ಯಾತ್ರೆಗೆ
ಅಸಹಜ ಶೈಲಿಗಳು ಯಾಕೆ
ವಿವಾಹ ಉದ್ದೇಶಕ್ಕೆ ಸೀಮಿತವಿರಲಿ
ಕೆಟ್ಟ ಚಿಂತನೆ ಪ್ರೇಮಿಗಳಿಗೇಕೆ!?
ಅನೇಕ ಯುವತಿಯರ ದೇಹಗಳು
ಅಟ್ಟಹಾಸಕ್ಕೆ ಬಲಿಯಾಗಿವೆ
ದೂರ ಪ್ರಚೋದನೆಯೇ ಕಾರಣ
ಸ್ವಲ್ಪ ಮನುಷ್ಯ ಚಿಂತಿಸಬೇಡವೇ?
ಅರಿತು ಸಾಗಿರಿ ಪ್ರಸ್ತುತ ಸಮಯದಿ
ದಿಕ್ಕು ತಪ್ಪಿಸುವವರಿದ್ದಾರೆ
ಯಾರೋ ಹೋದರೆ ಇವರಿಗೆ ಲಾಭ
ಇದೇ ಜೀವನದ ನಷ್ಟದ ಹೊರೆ
-ಎಂ.ಎ.ಮುಸ್ತಫಾ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!