ಕಂಪು ಸೂಸುವ ಕೆಂಪು ಮಿಶ್ರಿತ
ಹಳದಿ ಬಣ್ಣದ ತೊಳೆಗಳು
ಶುಚಿಯಲಿಟ್ಟಿಹ ರುಚಿಯಲದ್ಭುತ
ಎನಿಸುವಂತಹ ಫಲಗಳು
ಸಿಹಿಯ ಜೇನಿಗೆ ಬಹಳ ಹತ್ತಿರ
ಕಹಿಯ ಮರೆಸುವ ಹಣ್ಣಿದು
ಮನೆಯ ಅಂಗಳ ಸನಿಹ ಗಿಡದಲಿ
ಮನವ ಸೆಳೆದಿಹ ಹಲಸಿದು
ಬಣ್ಣ ಕಾಣಲು ತಿನ್ನುವಾಸೆಯು
ನನ್ನ ಮನದಲಿ ಬಂದುದು
ವರ್ಷದಾದಿಗೆ ಹರ್ಷವಿತ್ತುದು
ಬಲಿತ ಹಣ್ಣಿದು ದೊರೆತುದು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!