ಮೋಹಿನಿ
ಹಳಬರು ಮಾತ್ರ ಓದುತ್ತಾರೆ
ಕುಮಾರವ್ಯಾಸನ ಭಾಮಿನಿ
ಲಕ್ಷ್ಮೀಶನ ಜೈಮಿನಿ
ಹೊಸಬರಿಗೆ ಮೊಬೈಲೇ ಮೋಹಿನಿ
ನೋಡುತ್ತಾರೆ ಗೂಗಲ್ ಜೇಮಿನಿ
ಉದಾಸೀನ
ಮೊಬೈಲಲ್ಲಿ
ನೆಟ್ಟು ಬಳಸಲು
ಸದಾ ಆಸೀನ
ನಾಲ್ಕೈದು ಗಿಡಗಳ
ನೆಟ್ಟು ಬೆಳೆಸಲು
ಉದಾಸೀನ
ವಾಣಿ
ಕಿವಿಗೆ ಇಯರ್ ಪೋನು
ಕೈಯಲ್ಲಿ
ಜಂಗಮವಾಣಿ
ಮುಖತಃ ಕಂಡರೆ
ಮಾತೇ ಇಲ್ಲ
ಮನುಷ್ಯ ಆಗಿದ್ದಾನೆ
ಮೂಕ ಪ್ರಾಣಿ
-ಹರೀಶ್ ನಾಯಕ್, ಕಾಸರಗೋಡು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!