ಟೊಮೇಟೋ ಹೆಚ್ಚಿ ಬೇಯಿಸಿಕೊಳ್ಳಿ, ಇದಕ್ಕೆ ಸ್ವಲ್ಪ ಎಣ್ಣೆಯಲ್ಲಿ ಹುರಿದ ಉದ್ದಿನ ಬೇಳೆ, ಮೆಣಸು, ಎಳ್ಳು, ಸಾಸಿವೆ ೧/೪  ಚಮಚ ಹಾಕಿ ಕಾಯಿತುರಿ ಉಪ್ಪು ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಿ. ಇದಕ್ಕೆ ಎಣ್ಣೆ ಉದ್ದಿನ ಬೇಳೆ, ಸಾಸಿವೆ ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಿಸಿ. ಹುಳಿಯಾಗದಿದ್ದಲ್ಲಿ ಮೊಸರು ಸ್ವಲ್ಪ ಸೇರಿಸಬಹುದು. ಅನ್ನದ ಜೊತೆ ಮಾವಿನ ಕಾಯಿ ಬೂತಗೊಜ್ಜಿನಂತೆ ಚೆನ್ನಾಗಿರುತ್ತದೆ.

-ಕಲ್ಪನಾ ಪ್ರಭಾಕರ ಹೆಗಡೆ ಸೋಮನಳ್ಳಿ