ಕಡಲೇಬೇಳೆಯನ್ನು ಅರ್ಧ ಗಂಟೆ ನೆನೆಯಲು ಬಿಡಿ. ಅದನ್ನು ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ಕರಡಿಕೊಳ್ಳಿ. ಎಣ್ಣೆಯನ್ನು ಕಾಯಿಸಿಕೊಳ್ಳಿ. ಬೂಂದಿ ಮಾಡುವ ಪಾತ್ರೆಗೆ ಹಿಟ್ಟನ್ನು ಹಾಕಿ ಎಣ್ಣೆಗೆ ಬಿಡಿ. ಗರಿಗರಿ ಬರುವಂತೆ ಕರಿದುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಸ್ವಲ್ಪ ನೀರು ಬೆರೆಸಿ ಪಾಕಕ್ಕೆ ಇಡಿ. ಇದಕ್ಕೆ ಏಲಕ್ಕಿ ಪುಡಿ ಹಾಕಿಬಿಡಿ. ನೂಲಿನ ಪಾಕಕ್ಕಿಂತ ಜಾಸ್ತಿ ಗಟ್ಟಿ ಬರುವಂತೆ ಪಾಕ ಮಾಡಿ ಇದಕ್ಕೆ ಕರಿದ ಕಾಳನ್ನು ಹಾಕಿ ಕಲಸಿಕೊಳ್ಳಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಉಂಡೆಗಳನ್ನು ಕಟ್ಟಿ.

-ಕಲ್ಪನಾ ಪ್ರಭಾಕರ ಸೋಮನಳ್ಳಿ