ಪನೀರ್, ರವೆಗಳನ್ನು ಮಿಕ್ಸರ್‌ನಲ್ಲಿ ಹಾಕಿ ಬೆಣ್ಣೆಯಷ್ಟು ಮೃದುವಾದ ಮುದ್ದೆ ಮಾಡಿ. ಇದನ್ನು ಇಷ್ಟವೆನಿಸಿದಂತೆ ಉಂಡೆ ಕಟ್ಟಿ. ಹೀಗೆ ಉಂಡೆ ಕಟ್ಟುವಾಗಲೇ ಅದರಲ್ಲಿ ಕಿತ್ತಳೆಯನ್ನೂ, ಜಿಲೇಬಿಗೆ ಹಾಕುವ ಬಣ್ಣವನ್ನು ಕೂಡಿಸಿ. ಎರಡು ಲೋಟ ಸಕ್ಕರೆ, ಐದು ಲೋಟ ನೀರು ಹಾಕಿ ಒಲೆಯ ಮೇಲೆ ಪಾಕ ತಯಾರಿಸಿ. ಪಾಕ ಸ್ವಲ್ಪ ಉಕ್ಕಲಿ, ಅಷ್ಟರವರೆಗೆ ಕಾಯಿಸಿ.

ಈಗ ಮೊದಲೇ ತಯಾರಿಸಿಟ್ಟುಕೊಂಡ ಉಂಡೆಗಳನ್ನು ಎತ್ತಿಕೊಳ್ಳಿ. ಒಂದೊಂದಕ್ಕೂ ಒಂದೊಂದು ಕುಸುರಳ್ಳು ತುಂಬಿ ಮತ್ತೆ ಗಟ್ಟಿಯಾದ ಉಂಡೆ ಕಟ್ಟಿ. ಬಿಸಿ ಪಾಕದಲ್ಲಿ ಹಾಕಿರಿ. ಸ್ವಲ್ಪ ಕುದಿಯಲು ಬಿಡಿ. ಆ ಮೇಲೆ ಕೆಳಗಿಳಿಸಿ. ಆರಿದ ಮೇಲೆ ಎರಡು ಚಿಟಿಕೆ ಕಿತ್ತಲೆ ರುಚಿಯ ಬಣ್ಣ ಹಾಕಿರಿ. ಬಂಗಾಲಿಗಳು ಕಿತ್ತಳೆ ಹಣ್ಣಿಗೆ 'ಕಮಲಾ ಲೆಗು' ಎಂದು ಕರೆಯುವುದುಂಟು. ಹೀಗಾಗಿ ಇದನ್ನು 'ಕಮಲಾಭೋಗ' ಎಂದು ಹೆಸರಿಸಿದ್ದು. ಹೆಸರು ಮಜವಾಗಿದೆಯಲ್ಲವೆ? ಮಾಡಿ ತಿಂದು ನೋಡಿ, ಇನ್ನೂ ಮಜವಾಗಿರುತ್ತದೆ.

-ರಾಧಿಕಾ