ಆ ಮನೆಯಲ್ಲಿದ್ದದ್ದು ಮೂರು ಮಕ್ಕಳು, ಒಂದು ಗಂಡು ಎರಡು ಹೆಣ್ಣು. ಕೊನೆಯ ಮಗು ಅವರ ಇಷ್ಟದ ಪ್ರಕಾರ ಆದದ್ದಲ್ಲ. ಆ ಕಾರಣಕ್ಕೆ ಆ ಮಗುವಿನ ಮೇಲೆ ಅಷ್ಟೇನು ಪ್ರೀತಿಯೂ ಇರಲಿಲ್ಲ. ಬೈಗುಳಕ್ಕೆ ಹೊಡೆತಕ್ಕೆ ಮನೆ ಕೆಲಸಕ್ಕೆ ಆಗಾಗ ಎಲ್ಲರ ಮುಂದೆ ಹೀಯಾಳಿಸುವುದಕ್ಕೆ ಆ ಮಗು ಬಳಕೆಯಾಗುತ್ತಿತ್ತು. ಮೊದಲೆರಡು ಮಗುವಿನ ಮೇಲೆ ಇದ್ದ ಪ್ರೀತಿ ಇರಲೇ ಇಲ್ಲ. ಮನೆಯ ಎಲ್ಲ ಕೆಲಸಗಳನ್ನು ಮುತುವರ್ಜಿಯಿಂದ ಪ್ರೀತಿಯಿಂದ ಮಾಡಿ, ಓದಿ ಸ್ವಂತ ಕೆಲಸ ಸಂಪಾದಿಸಿ ತನ್ನ ಕಾಲ ಮೇಲೆ ನಿಂತಳು. ಅವಳು ನಿಂತೆ ಬಿಟ್ಟಳು. ಒಂದಷ್ಟು ಸ್ವಾರ್ಥವನ್ನು ಹೊಂದಿದ್ದ ಮೊದಲ ಎರಡು ಮಕ್ಕಳು ಅವರವರ ದಾರಿಯನ್ನ ನೋಡಿಕೊಂಡ್ರು ಈಗ ಮನೆಯವರ ಇಷ್ಟಗಳಿಗೆ ಆಗಾಗ ಕೇಳುವ ಆರೋಗ್ಯದ ಮದ್ದಿಗಾಗಿ, ಅವರ ಊರಿನ ತಿರುಗಾಟಕ್ಕಾಗಿ ಇಷ್ಟವಿಲ್ಲದ ಮಗಳೇ ಆಸರೆಯಾಗಿದ್ದಾಳೆ. ಆಗಾಗ ಫೋನಾಯಿಸುತ್ತಾಳೆ ಆರೋಗ್ಯ ವಿಚಾರಿಸುತ್ತಾಳೆ. ಈಗ ಕಾಡುತ್ತಿದೆ. ಹಿಂದೆ ತಾವು ಪ್ರೀತಿ ತೋರಿಸದೆ ಇರೋಳು ತಮ್ಮ ಪ್ರೀತಿಗೆ ಆಸರೆಯಾಗಿದ್ದಾಳೆ ಅನ್ನೋದು .
ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!