ಒಬ್ಬ ದೋಣಿಯ ಮಾಲೀಕ ಬಣ್ಣ ಮಾಸಿದ್ದ ತನ್ನ ದೋಣಿಗೆ ಬಣ್ಣ ಬಳಿಯಲು ಪೇಂಟರ್‌ ಗೆ ಒಪ್ಪಿಸಿದನು. ಆ ಪೇಂಟರ್ ಆ ದೋಣಿಗೆ ಬಣ್ಣ ಹಚ್ಚುತ್ತಿರುವಾಗ ದೋಣಿಯ ಕೆಳಭಾಗದಲ್ಲಿ ಒಂದು ರಂಧ್ರವನ್ನು ಗಮನಿಸಿದನು. ರಂಧ್ರವನ್ನು ಸರಿಪಡಿಸಿ, ಬಣ್ಣ ಹಚ್ಚಿ ತನ್ನ ಕೆಲಸ ಮುಗಿಸಿ ಹೊರಟುಹೋದನು.  

ಎರಡು ದಿನಗಳ ನಂತರ ದೋಣಿಯ ಮಾಲೀಕರು ರೂ. ಒಂದು ಲಕ್ಷ ತಂದು ಪೇಂಟರ್ ಗೆ ಕೊಟ್ಟ. ಆಗ ಪೇoಟರ್ " ನನ್ನ ಹಣವನ್ನು ಆಗಲೇ  ಕೊಟ್ಟಿರುವಿರಲ್ಲಾ, ಮತ್ತೆ ಈ ಹಣ ಏಕೆ!! ಎಂದು ಆಶ್ಚರ್ಯಭರಿತ ಸಂದೇಹದಿಂದ ಕೇಳಿದನು.

ಇದು ನೀನು 'ಪೇಂಟ್ ಮಾಡಿದುದಕ್ಕಲ್ಲ, ನೀನು  ದೋಣಿಯ ಆ ರಂಧ್ರವನ್ನು ಮುಚ್ಚಿ ಸರಿಪಡಿಸಿದುದಕ್ಕಾಗಿ !'  ಎಂದು ಕಣ್ಣೀರಿಡುತ್ತಾ ಆ ದೋಣಿಯ ಮಾಲಿಕ ಹೇಳಿದರು. 

"ಅದು ತುಂಬಾ ಚಿಕ್ಕದು. ಹಣ ತೆಗೆದುಕೊಳ್ಳುವಷ್ಟು ದೊಡ್ಡದಲ್ಲ"  ಎಂದನು ಪೇಂಟರ್.

ಅದು ಹಾಗಲ್ಲ, ನಿನಗೆ ಬಣ್ಣ ಬಳಿಯುವ ಕೆಲಸ ಒಪ್ಪಿಸಿದಾಗ ಆ ದೋಣಿಯಲ್ಲಿ ರಂಧ್ರವಿದೆ ಎಂದು ಹೇಳಲು ನಾನು ಮರೆತಿದ್ದೆ. ನಂತರ ನಮ್ಮ ಮಕ್ಕಳು ಸಮುದ್ರದಲ್ಲಿ ಮೀನು ಹಿಡಿಯಲು ದೋಣಿಯಲ್ಲಿ ಹೋದರು. ದೋಣಿಯ ರಂಧ್ರದ ಬಗ್ಗೆ ಅವರಿಗೆ ತಿಳಿದಿರಲಿಲ್ಲ, ನಾನೂ ಸಹ ಅವರಿಗೆ ಹೇಳಲು ಮರೆತಿದ್ದೆ.  ಅವರು ಸಮುದ್ರಕ್ಕೆ ಹೋಗಿದ್ದಾರೆ ಎಂದು ತಿಳಿದು ನನಗೆ ವಿಪರೀತ ಭಯ ಶುರುವಾಯಿತು. ನಾನು ರಿಪೇರಿ ಮಾಡು ಎಂದು ನಿನಗೆ ಹೇಳುವುದನನ್ನ ಮರೆತಿದ್ದೆ. ಅವರು ಸುರಕ್ಷಿತವಾಗಿ ಹಿಂತಿರುಗಿದ ನಂತರ, ರಂಧ್ರವನ್ನು ತುಂಬಿ ದುರಸ್ತಿ ಮಾಡಿರುವುದನ್ನು ನಾನು ನೋಡಿದೆ. ನಾನು ಹೇಳದಿದ್ದರೂ ನೀನು ಅದನ್ನು ಸರಿಮಾಡಿದುದ್ದಕ್ಕೆ ನಿನಗೆ ಹೇಗೆ ಕೃತಜ್ಞತೆ ಹೇಳಬೇಕೋ ತಿಳಿಯುತ್ತಿಲ್ಲ. ನಿನ್ನ ಈ ಚಿಕ್ಕ  ಸಹಾಯ ನನ್ನ ಮಕ್ಕಳ ಜೀವ ಉಳಿಸಿತು ಎಂದೆನ್ನುತ್ತಾ ಆ ದುಡ್ಡನ್ನು ಅಲ್ಲಿಟ್ಟು ಹೊರಟು ಹೋದನು.

ಮಿತ್ರರೇ ಈ ಕಥೆಯ ಸಾರ ಇಷ್ಟೇ - ಯಾರು? ಏನು? ಏಕೆ? ಎಂದು ಆಲೋಚಿಸದೆ ಸಹಾಯ ಮಾಡಿರಿ, ಎಷ್ಟು ಸಣ್ಣದಾದರೂ ಸಹಾಯ ಮಾಡಲು ಹಿಂಜರಿಯದಿರಿ, ಏಕೆಂದರೆ ನೀವು ಮಾಡುವ ಒಂದು  ಅತೀ ಚಿಕ್ಕ ಸಹಾಯವೂ ಇನ್ನೊಬ್ಬರಿಗೆ  ಮೌಲ್ಯಯುಕ್ತವಾಗಿರಬಹುದು.

~ಸಂಪಿಗೆ ವಾಸು, ಬಳ್ಳಾರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ