ಬೇಸಿಗೆ ಕಾಲಕ್ಕೆ ನಮಗಾಗುವ ನಿರ್ಜಲೀಕರಣದ ಸಮಸ್ಯೆಗೆ ಕಲ್ಲಂಗಡಿ ಹಣ್ಣು ರಾಮಬಾಣ. ಈ ವಿಷಯ ಎಲ್ಲರಿಗೂ ಗೊತ್ತಿರುವುದೇ. ಬೇಸಿಗೆಯಲ್ಲಿ ವಿಪರೀತ ಸೆಖೆ ಮತ್ತು ಬೆವರಿನಿಂದ ಮುಖ ಮಂದವಾಗಿ, ಕಳಾಹೀನವಾಗಿ ಕಾಣಿಸುತ್ತದೆ. ಅಲ್ಲದೆ ಅತಿಯಾದ ತಾಪಮಾನದ ಕಾರಣದಿಂದ ಮುಖದ ಬಣ್ಣವೂ ಕಂದು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ತ್ವಚೆಯ ಕಾಳಜಿಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳಿಂದಲೂ ತ್ವಚೆಯ ಕಾಳಜಿ ಮಾಡಬಹುದು. ಬೇಸಿಗೆ ಕಾಲದಲ್ಲಿ ಯತೇಚ್ಛವಾಗಿ ಸಿಗುವ ಕಲ್ಲಂಗಡಿ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ.

ಬೇಸಿಗೆಯಲ್ಲಿ ದಾಹವನ್ನು ತೀರಿಸಲು ಕಲ್ಲಂಗಡಿ ಹಣ್ಣನ್ನು ಹೆಚ್ಚಿನವರು ಮನೆಗೆ ತರುತ್ತಾರೆ. ಇದು ದೇಹವನ್ನು ಹೈಡ್ರೆಟ್ ಮಾಡುವ ಜೊತೆಗೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕಲ್ಲಂಗಡಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ. ಪೊಟ್ಯಾಸಿಯಮ್, ಮೆನ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಿವೆ. ಇದು ಆರೋಗ್ಯ ಹಾಗೂ ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕಲ್ಲಂಗಡಿ ಹಣ್ಣು ದೇಹವನ್ನು ತಂಪಾಗಿಸುವ ಗುಣ ಹೊಂದಿದ್ದು, ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ. ಈ ಲೇಖನದಲ್ಲಿ ಕಲ್ಲಂಗಡಿ ರಸವನ್ನು ನಿಮ್ಮ ಮುಖಕ್ಕೆ ಹಚ್ಚುವುದರಿಂದ ಏನು ಪ್ರಯೋಜನ ಎಂಬುದನ್ನು ತಿಳಿಯೋಣ…

ಕಲ್ಲಂಗಡಿ ಏಕೆ ಉತ್ತಮ?: ಬೇಸಿಗೆಯಲ್ಲಿ ಕಲ್ಲಂಗಡಿ, ಕರ್ಬೂಜ (ಚಿಪ್ಪಡ್) ಮುಂತಾದ ಸಿಹಿ ಮತ್ತು ರಸಭರಿತ ಹಣ್ಣುಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿರುತ್ತವೆ ಮತ್ತು ಜನರು ಅವುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇದು ಪೊಟ್ಯಾಸಿಯಮ್, ಲೈಕೋಪೀನ್, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಎ ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತದೆ. ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ.

ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶ ಇರುವುದರಿಂದ ಅದರ ಸೇವನೆಯಿಂದ ಚರ್ಮವು ತೇವಾಂಶದಿಂದ ಕೂಡಿದ್ದು, ನೈಸರ್ಗಿಕ ಹೊಳಪನ್ನು ಕಾಯ್ದು ಕೊಳ್ಳುತ್ತದೆ. ಇದು ಮುಖದ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಹೈಡೇಟಿಂಗ್ ಗುಣಗಳನ್ನು ಹೊಂದಿದೆ. ಕಲ್ಲಂಗಡಿಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ, ಆದ್ದರಿಂದ ಇದರ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಮುಖವನ್ನು ತಂಪಾಗಿಸುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ.

ಕಲ್ಲಂಗಡಿ ತಿನ್ನುವುದರ ಜೊತೆಗೆ, ನೀವು ಅದರ ರಸವನ್ನು ಮುಖಕ್ಕೆ ಹಚ್ಚಿಬಹುದು ಏಕೆಂದರೆ ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಆದ್ದರಿಂದ ಇದು ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮವು ಒರಟಾಗಿದ್ದರೆ ಕಲ್ಲಂಗಡಿ ರಸದ ಮಸಾಜ್ ಮಾಡಿ. ಇದು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಒರಟುತನವನ್ನು ನೀಗಿಸುತ್ತದೆ. ಚರ್ಮದಲ್ಲಿ ತೇವಾಂಶವನ್ನು ಕಾಪಾಡುವುದರಿಂದ ಚರ್ಮದ ಹೊಳಪಿಗೆ ಕಾರಣವಾಗುತ್ತದೆ.

ಹೊಳೆಯುವ ಚರ್ಮಕ್ಕಾಗಿ, ನಾವು ಮುಲ್ತಾನಿ ಮಿಟ್ಟಿ, ಆಲೂಗಡ್ಡೆ ರಸ, ಅಲೋವೆರಾ, ರೋಸ್ ವಾಟರ್ ನಂತಹ ಅನೇಕ ನೈಸರ್ಗಿಕ ಉತ್ಪನ್ನಗಳ ನ್ನು ಮುಖಕ್ಕೆ ಹಚ್ಚುತ್ತೇವೆ. ಹಾಗೆಯೇ ನೀವು ಕಲ್ಲಂಗಡಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ. ನೀವು ಕಲ್ಲಂಗಡಿ ರಸದಲ್ಲಿ ಸ್ವಲ್ಪ ಹಾಲು ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಈಗ ತಿಳಿಯಿತಲ್ಲವೇ ಕಲ್ಲಂಗಡಿ ಹಣ್ಣಿನ ಬಹು ಉಪಯೋಗಗಳು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ