ಪ್ರಕೃತಿ ವಿಸ್ಮಯಗಳ ಖಜಾನೆ. ಮೊಟ್ಟೆಯಾಕಾರದ ವಸ್ತುಗಳು ಎಷ್ಟಿವೆ ಎಂದು ಗಮನಿಸಿದ್ದೀರಾ?

ಒಮ್ಮೆ ಸುತ್ತ ಕಣ್ಣು ಹಾಯಿಸಿ. ಮೊಟ್ಟೆಗಳ ಹೊರತಾಗಿ ಅದೇ ಆಕಾರದ ಅಂದರೆ ಉರುಟಾಗಿ, ನಯವಾಗಿ ಇರುವ   ಹಲವಾರು ವಸ್ತುಗಳು ಕಾಣಿಸುತ್ತವೆ.

ಉದಾಹರಣೆಗೆ:

ಹುಳಿಯಾದ ನಿಂಬೆ ಹಣ್ಣುಗಳು

ಸಿಹಿಯಾದ ದ್ರಾಕ್ಷಿ ಹಣ್ಣುಗಳು

ರಸಭರಿತವಾದ ಕಲ್ಲಂಗಡಿ (ಬಚ್ಚಂಗಾಯಿ)

ರುಚಿಯಾದ ಪ್ಲಮ್ ಹಣ್ಣುಗಳು

ನ್ಯೂಝಿಲ್ಯಾಂಡಿನ ಕಿವಿ ಹಣ್ಣುಗಳು

ಮೊಟ್ಟೆಯಾಕಾರದ ಎಲೆಗಳೂ ಇವೆ, ನೋಡಿದ್ದೀರಾ?

ಉದಾಹರಣೆಗೆ, ಎಲ್ಮ್ ಮರದ ಎಲೆ (ಫೋಟೋ 2) ಮತ್ತು ಬೀಚ್ ಮರದ ಎಲೆಗಳು

ಇವಲ್ಲದೆ, ಸಮುದ್ರ ಹಾಗೂ ನದಿ ತೀರದಲ್ಲಿ ಮೊಟ್ಟೆಯಾಕಾರದ ರಾಶಿರಾಶಿ ಚಪ್ಪಟೆ ಕಲ್ಲುಗಳು ಸಿಗುತ್ತವೆ. ಸಮುದ್ರದ ಮತ್ತು ನದಿಯ ನೀರಿನ ನಿರಂತರ ಹರಿವು ಆ ಕಲ್ಲುಗಳನ್ನು ನಯವಾಗಿ ಮಾಡಿರುತ್ತದೆ.

ಇದೇ ರೀತಿಯಲ್ಲಿ, ಪ್ರಕೃತಿಯಲ್ಲಿ ಇತರ ಆಕಾರದ ವಸ್ತುಗಳನ್ನೂ ನೀವು ಗುರುತಿಸಬಹುದು: ತ್ರಿಕೋನ, ವೃತ್ತ, ಕಂಸ, ಷಡ್ಭುಜ ಆಕಾರದ ವಸ್ತುಗಳನ್ನು. ಒಂದು ಭಾನುವಾರ ಅಥವಾ ರಜಾದಿನದ ಸಂಜೆ, ನಿಮ್ಮ ಮನೆಯ ಹತ್ತಿರ ಪ್ರಕೃತಿಯ ಮಡಿಲಿನಲ್ಲಿ ಸುತ್ತಾಡುತ್ತಾ ಇತರ ಆಕಾರದ ವಸ್ತುಗಳನ್ನು ಗುರುತಿಸಲು ಹೊರಟು ಬಿಡಿ. ನಿಮಗೆ ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಯಾಕೆಂದರೆ, ಪ್ರಕೃತಿಯೊಂದಿಗೆ ಒಡನಾಟ ಅತ್ಯಂತ ಉಲ್ಲಾಸದ ಚಟುವಟಿಕೆ!

ಫೋಟೋ 1: ರೋಬಿನ್ ಹಕ್ಕಿಯ ನೀಲಿ ಮೊಟ್ಟೆಗಳು

ಫೋಟೋ 2: ಎಲ್ಮ್ ಮರದ ಎಲೆ

ಫೋಟೋ 3: ಕಲ್ಲಂಗಡಿ ಹಣ್ಣು ಮತ್ತು ಪ್ಲಮ್ ಹಣ್ಣುಗಳು

ಫೋಟೋ 4: ವಿವಿಧ ಬಣ್ಣಗಳ ಚಪ್ಪಟೆ ಕಲ್ಲುಗಳು

ಕೃಪೆ: ಆರ್.ಎಸ್. ಸ್ಪ್ರಿಂಗ್ ಪತ್ರಿಕೆ