ಒಂಟಿಯಾಗಿರುತ್ತಿದ್ದ ಶ್ರೀಮಂತ ಮಹಿಳೆಯೊಬ್ಬಳು ಮಾತನಾಡುವ ಗಿಣಿಯನ್ನು ತನ್ನ ಒಡನಾಟಕ್ಕಾಗಿ ಇರಲಿ ಎಂದು ಖರೀದಿಸುತ್ತಾಳೆ. ಆದರೆ ಮರುದಿನ, ಮತ್ತೆ ಅವಳು ಆ ಅಂಗಡಿಗೆ ಬಂದು ಆ ಗಿಳಿ ಮಾತನಾಡುತ್ತಿಲ್ಲ ಎಂದು ತನ್ನ ಅಸಹನೆಯನ್ನು ವ್ಯಕ್ತ ಪಡಿಸಿದಳು.
ಆಗ ಅಂಗಡಿಯವನು "ನೀವು ಪಂಜರದಲ್ಲಿ ಕನ್ನಡಿ ಇಟ್ಟಿದ್ದೀರಾ! ಗಿಳಿಗಳು ಕನ್ನಡಿಗಳನ್ನು ಪ್ರೀತಿಸುತ್ತವೆ, ಅವುಗಳು ತಮ್ಮತ್ತ ನೋಡಿಕೊಂಡು ಮಾತನಾಡುತ್ತವೆ." ಮಹಿಳೆ ಕನ್ನಡಿಯನ್ನು ಖರೀದಿಸಿ ಪಂಜರದಲ್ಲಿ ಇಟ್ಟಳು. ಮರುದಿನ ಬಂದು "ಇನ್ನೂ ಮಾತನಾಡುತ್ತಿಲ್ಲ" ಎಂದು ದೂರಿದಳು. "ಗಿಳಿಗಳಿಗೆ ಏಣಿಯೆಂದರೆ ಪ್ರಾಣ, ಸಣ್ಣ ಏಣಿಯೊಂದನ್ನು ಒಳಗೆ ಇಡಿರಿ. ಹಾಗೆಯೇ ಮಾಡಿದಳು, ಪ್ರಯೋಜನವಾಗಲಿಲ್ಲ.
ಪಂಜರದಲ್ಲಿ ಉಯ್ಯಾಲೆ ಇದೆಯೇ? ಉಯ್ಯಾಲೆಯಲ್ಲಿ ತೂಗಾಡುತ್ತಾ ಬಿಡುವಿಲ್ಲದೆ ಮಾತನಾಡುತ್ತದೆ." ಪಂಜರದಲ್ಲಿ ಹಿಡಿಸಬಹುದಾದ ಒಂದು ಸಣ್ಣ ಉಯ್ಯಾಲೆಯೊಂದನ್ನು ತೆಗೆದುಕೊಂಡು ಹೋಗಿ ಅದರಲ್ಲಿ ಇಟ್ಟಳು ಉಹೂಂ ಪ್ರಯೋಜನವಾಗಲಿಲ್ಲ
ಮರುದಿನ ಏದುಸಿರು ಬಿಡುತ್ತಾ ಬಂದ ಅವಳು "ಗಿಳಿಗಳಿಗೆ ತಿನ್ನಲು ಇಲ್ಲಿ ಏನೂ ಮಾರುವುದಿಲ್ಲವೇ?," ಎಂದಳು .
"ಏನಾಯಿತು!" ಅವನು ಕೇಳಿದ. ನೀವು ಹೇಳಿದ ಎಲ್ಲವನ್ನು ಮಾಡಿದೆ ಆದರೆ ತಿನ್ನಲು ಊಟ ಹಾಕಲಿಲ್ಲ.!
ಇಲ್ಲಿ ನಾವುಗಳೆಲ್ಲರೂ ಅರಿಯ ಬೇಕಾದುದಿಷ್ಟೇ.
ಅನೇಕ ಬಾರಿ ಜೀವನದಲ್ಲಿ ಮುಖ್ಯವಾದುದನ್ನು ಮರೆತು ಮುಖ್ಯವಲ್ಲದ ವಿಷಯಗಳತ್ತ ನಾವು ಒಲವು ತೋರುತ್ತೇವೆ. ಹೌದು, ನಾವು ಕುಟುಂಬಕ್ಕೆ ಒಳ್ಳೆಯ ಮನೆ, ಕಾರು, ಸೋಫಾಗಳು, ಸ್ಮಾರ್ಟ್ ಫೋನ್ ಗಳನ್ನು ಎಲ್ಲವನ್ನೂ ಖರೀದಿಸುತ್ತೇವೆ, ನಾವು ಎಲ್ಲರನ್ನೂ ಸಂತೋಷಪಡಿಸುತ್ತಿದ್ದೇವೆ ಎಂದು ಭ್ರಮೆ ಪಡುತ್ತೇವೆ - ಅದು ನಿಜಕ್ಕೂ ತಪ್ಪು. .
ಪ್ರೀತಿ, ವಾತ್ಸಲ್ಯ, ಗೌರವ, ಸಭ್ಯತೆ ಇವೆಲ್ಲಕ್ಕಿಂತ ಮಿಗಿಲು ಮತ್ತು ಬಹಳ ಮುಖ್ಯ. ಹೌದೆನಿಸುವುದಿಲ್ಲವೇ?
~ಸಂಪಿಗೆ ವಾಸು, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!