ಎಳೆಯ ಕಂದರು ಸೊಗಸಿನ ಚಿಣ್ಣರು
ಕಳೆಯಿಂದ ಮಿರಿಮಿರಿ ಮಿಂಚುವರು
ದೇವರು ನೀಡಿದ ವರಪ್ರಸಾದ ಕಿನ್ನರರು
ಚೆಲುವ ಸುಂದರ ಹೊನ್ನಿನ ಇಂದ್ರರು
ಮನೆಯನು ಬೃಂದಾವನ ಮಾಡುವ ಬಾಲರು
ಕಿಲಕಿಲ ನಗುತ ಹಿರಿಯರ ಕಾಡ್ವರು
ಅಪ್ಪ ಅಮ್ಮನ ಮುದ್ದಿನ ಪೋರರು
ಎಲ್ಲರ ಗಮನವ ಸೆಳೆಯುತ ನಲಿವರು
ಮಕ್ಕಳ ಮನವ ಅರಿತು ನಡೆಯಿರಿ
ತಕ್ಕ ಶಿಕ್ಷೆಯ ಪ್ರೀತಿಲಿ ಹೇಳಿರಿ
ತಪ್ಪನು ತಿದ್ದಿ ಮೌಲ್ಯವ ಕಲಿಸಿರಿ
ಹೂವಿನಂತೆ ಮಕ್ಕಳು ಎನ್ನುತ ಸಾರಿರಿ
ರವಿಯ ತೇಜ ಶಶಿಯ ತಂಪು
ತನುವಿಗೆ ತುಂಬಿ ಹರಡಲಿ ಕಂಪು
ಕೋಗಿಲೆ ಗಾನದ ವೈಭವ ಇಂಪು
ನಾಲ್ದೆಸೆ ಪಸರಿಸಿ ಹಿಗ್ಗಲಿ ಸೊಂಪು
-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು
ಚಿತ್ರದಲ್ಲಿ ಬೋಂದೇಲ್ ಕಂಬ್ಳ ಮಕ್ಕಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!