ಬನ್ನಿರಿ ಬನ್ನಿರಿ ಕಂದಮ್ಮಗಳೇ
ತನ್ನಿರಿ ತನ್ನಿರಿ ಸುಮಗಳನು
ಹೂವಿನ ರಂಗೋಲಿ ಹಾಕೋಣ
ಸ್ವಾಗತ ಗೀತೆಯ ಹಾಡೋಣ
ಚಾಚಾ ನೆಹರೂ ನಮ್ಮ ಪ್ರಧಾನಿ
ಜನುಮ ದಿನವ ನೆನೆಯೋಣ
ಬಣ್ಣ ಬಣ್ಣದ ಧಿರಿಸನು ತೊಟ್ಟು
ಕೈ ಕೈ ಹಿಡಿದು ನಲಿಯೋಣ
ಭಾಷಣ ಸಂಗೀತ ಕೋಲಾಟ ನೃತ್ಯ
ಒಂದಾಗಿ ಸೇರುತ ಮಾಡೋಣ
ನೆಹರೂರವರ ಆದರ್ಶಗಳನು
ಗುರುಗಳ ಮೂಲಕ ತಿಳಿಯೋಣ
ಚಾಚಾರವರ ಭಾವಚಿತ್ರಕೆ
ಗುಲಾಬಿ ಹೂಗಳ ಅರ್ಪಿಸೋಣ
ಗುರು ಹಿರಿಯರ ಸಮ್ಮುಖದಲ್ಲಿ
ವೈವಿಧ್ಯ ಪ್ರದರ್ಶನ ಗೈಯೋಣ
ಹಕ್ಕಿನ ಜೊತೆಗೆ ಕರ್ತವ್ಯ ತಿರುಳು
ಹೆಗಲಿಗೇರಿದೆ ಅರಿವಿರಲಿ
ನಾಡು ನುಡಿ ರಾಷ್ಟ್ರವನು
ಎಂದೆಂದು ಗೌರವಿಸಿ ನಡೆಯೋಣ
ಮಕ್ಕಳ ದಿನಾಚರಣೆ ದಿನದಂದು
ಸಂಭ್ರಮ ಸಡಗರ ಪಡೋಣ
ಭಾರತಮಾತೆಯ ಮಡಿಲಿನ ಕುಡಿಗಳು
ಮೌಲ್ಯಯುತ ಪುಷ್ಪಗಳಾಗೋಣ
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ : ಅನುಶ್ರೀ ಬೋಂದೇಲ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!