ಮೇಘಶ್ಯಾಮನ ಎದೆಗೆ
ರಾಧೆ ಒರಗಿಹಳು
ಎದೆಯ ಬಡಿತವ ಕೇಳುತಾ
ಕೆಂಪಗೆ ನಾಚಿಹಳು
ನಾಚುತ್ತಾ ಕನಸಿಗೆ ಜಾರಿದಳು|
ರಾಧೆಯ ಬಿಸಿಯುಸಿರು
ಎದೆಗೆ ಸೋಂಕಿರಲು
ಕೃಷ್ಣನ ಮೈಮನವು
ಭಾವ ಸರಿತೆಯಲಿ ಮಿಂದಿರಲು
ತುಟಿಗಳು ಮುತ್ತಿನ ಆಸೆ ಬಯಸಿದವು|
ಅವಳ ಹಣೆಗೆ
ತುಟಿಯನ್ನೊತ್ತಿ ಮುತ್ತಿಟ್ಟನು
ಪ್ರೇಮಸುಧೆಯ ರಾಧೆಯ
ಮನಸ್ಸಿಗೆ ಹರಿಬಿಟ್ಟನು
ಅನುರಾಗದ ಅಲೆಗೆ ನೂಕಿದನು|
ರಾಧೆಯು ನಾಚಿ ಹೆಗಲ
ತೊರೆದು ತೊಡೆಗೆ ಒರಗಲು
ಕೃಷ್ಣನ ತುಟಿಯು ಅವಳ
ಬೆನ್ನಿಗೆ ಚುಂಬಿಸಿ ಮುಗಳ್ನಗಲು
ರಾಧೆ ಕೆಂಪಾಗಿ ನಾಚಿದಳು..|
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!