ತೆಂಗಿನ ಎಣ್ಣೆಯು ತಲೆಕೂದಲಿನ ಆರೈಕೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದರ ಸುಗಂಧ, ಪೌಷ್ಟಿಕ ಗುಣಗಳು ಮತ್ತು ಕೂದಲಿಗೆ ನೀಡುವ ರಕ್ಷಣೆಯಿಂದಾಗಿ ಇದನ್ನು "ಕೇಸರ ತೈಲ” ಎಂದೇ ಕರೆಯಲಾಗುತ್ತದೆ. ತೆಂಗಿನ ಎಣ್ಣೆಯು ಕೇವಲ ಸೌಂದರ್ಯವರ್ಧಕವಾಗಿರದೆ, ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಒಂದು ಉತ್ತಮ ಉತ್ಪನ್ನವಾಗಿದೆ. ಈ ಲೇಖನದಲ್ಲಿ, ತೆಂಗಿನ ಎಣ್ಣೆಯ ಪ್ರಯೋಜನಗಳು, ಅದರಲ್ಲಿರುವ ಅಂಶಗಳು, ಕೂದಲಿಗೆ ಇದರ ಉಪಯೋಗಗಳು, ಮತ್ತು ಇದಕ್ಕೆ ಸಂಬಂಧಿಸಿದ ವೈಜ್ಞಾನಿಕ ಅಧ್ಯಯನಗಳನ್ನು ಸಮಗ್ರವಾಗಿ ತಿಳಿಸಲಾಗಿದೆ.
ತೆಂಗಿನ ಎಣ್ಣೆಯಲ್ಲಿರುವ ಪೌಷ್ಟಿಕ ಅಂಶಗಳು: ತೆಂಗಿನ ಎಣ್ಣೆಯು ಸಮೃದ್ಧವಾದ ಪೋಷಕಾಂಶಗಳನ್ನು ಹೊಂದಿದ್ದು, ಕೂದಲಿನ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದೆ. ಮಧ್ಯಮ ಸರಪಳಿಯ ಕೊಬ್ಬಿನ ಆಮ್ಲಗಳು: ಲಾರಿಕ್ ಆಸಿಡ್, ಕಾಪ್ರಿಲಿಕ್ ಆಸಿಡ್ ಮತ್ತು ಕಾಪ್ರಿಕ್ ಆಸಿಡ್ ಇವು ಕೂದಲಿನ ತೂತುಗಳಿಗೆ ಆಳವಾಗಿ ತೂರಿಕೊಂಡು ತೇವಾಂಶವನ್ನು ಕಾಪಾಡುತ್ತವೆ.
ವಿಟಮಿನ್ ಇ: ಇದು ಉತ್ಕರ್ಷಣ ನಿರೋಧಕವಾಗಿದ್ದು, ಕೂದಲಿನ ಬೇರನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ವಿಟಮಿನ್ ಎ: ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಕಬ್ಬಿಣ ಮತ್ತು ಇತರ ಖನಿಜಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಲಾರಿಕ್ ಆಸಿಡ್ ನಿಂದಾಗಿ. ತೆಂಗಿನ ಎಣ್ಣೆಯು ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದರಿಂದ ತಲೆಹೊಟ್ಟು ಮತ್ತು ತುರಿಕೆಯಂತಹ ಸಮಸ್ಯೆಗಳನ್ನು ತಡೆಗಟ್ಟಬಹುದು.
ತಲೆಕೂದಲಿಗೆ ತೆಂಗಿನ ಎಣ್ಣೆಯ ಪ್ರಯೋಜನಗಳು: ತೆಂಗಿನ ಎಣ್ಣೆಯು ಕೂದಲಿನ ಆರೈಕೆಗೆ ಒಂದು ಸರ್ವತೋಮುಖ ಔಷಧಿಯಾಗಿದ್ದು, ಇದರ ಕೆಲವು ಪ್ರಮುಖ ಪ್ರಯೋಜನಗಳನ್ನು ಗಮನಿಸೋಣ.
ತೆಂಗಿನ ಎಣ್ಣೆಯಲ್ಲಿರುವ ವಿಟಮಿನ್ ಮತ್ತು ಕೊಬ್ಬಿನ ಆಮ್ಲಗಳು ಕೂದಲಿನ ಬೇರನ್ನು ಬಲಪಡಿಸುತ್ತವೆ. ಇದು ಕೂದಲಿನ ತೂತುಗಳಿಗೆ ಆಳವಾಗಿ ತೂರಿಕೊಂಡು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಒಡೆಯುವುದನ್ನು ತಡೆಗಟ್ಟುತ್ತದೆ. ತೆಂಗಿನ ಎಣ್ಣೆಯ ಆಂಟಿಮೈಕ್ರೋಬಿಯಲ್ ಗುಣಗಳು ತಲೆಯ ಚರ್ಮದ ಶಿಲೀಂಧ್ರ ಸೋಂಕುಗಳನ್ನು ತಡೆಗಟ್ಟುತ್ತವೆ. ಇದನ್ನು ರಾತ್ರಿಯಿಡೀ ತಲೆಗೆ ಹಚ್ಚಿ ಬೆಳಿಗ್ಗೆ ತೊಳೆದರೆ ತಲೆಹೊಟ್ಟು ಕಡಿಮೆಯಾಗುತ್ತದೆ.
ಕೂದಲಿಗೆ ತೇವಾಂಶ ನೀಡುತ್ತದೆ: ತಂಗಿನ ಎಣ್ಣೆಯು ಕೂದಲಿಗೆ ತೇವಾಂಶವನ್ನು ಕಾಪಾಡಿಕೊಂಡು, ಒಣ ಕೂದಲಿನ ಸಮಸ್ಯೆಯನ್ನು ತಡೆಗಟ್ಟುತ್ತದೆ. ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಪೌಷ್ಟಿಕಾಂಶವನ್ನು ಒದಗಿಸುವುದರಿಂದ, ಕೂದಲು ಉದುರುವಿಕೆಯಲ್ಲಿ ಕಂಡು, ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತದೆ. ತೆಂಗಿನ ಎಣ್ಣೆಯು ಕೂದಲಿನ ಬೇರನ್ನು ಗಟ್ಟಿಗೊಳಿಸುವಲ್ಲಿ ಸಹಕರಿಸುತ್ತದೆ. ನಿಯಮಿತವಾಗಿ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ , ಇದು ಕೂದಲಿನ ಬೆಳವಣಿಗೆಗೆ ಸಹಾಯಕವಾಗಿದೆ.
ತೆಂಗಿನ ಎಣ್ಣೆಯು ಕೂದಲಿನ ಪ್ರೋಟೀಸ್ ಕಳೆದುಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಇದು ಕೂದಲಿಗೆ ಒಂದು ರಕ್ಷಣಾ ಕವಚವನ್ನು ಒದಗಿಸುತ್ತದೆ, ವಿಶೇಷವಾಗಿ ಶಾಖ, ರಾಸಾಯನಿಕ ಚಿಕಿತ್ಸೆ ಅಥವಾ ಕಲುಪಿತ ವಾತಾವರಣದಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ತೆಂಗಿನ ಎಣ್ಣೆಯನ್ನು ಕಂಡಿಷನರ್ ಆಗಿ ಬಳಸಿದರೆ, ಕೂದಲು ಮೃದುವಾಗಿ, ಹೊಳಪುಗೊಳ್ಳುವಂತೆ ಮಾಡುತ್ತದೆ. ಇದನ್ನು ಶಾಂಪೂಗಿಂತ ಮೊದಲು ಅಥವಾ ನಂತರ ಬಳಸಬಹುದು.
(ಮುಂದುವರೆಯುತ್ತದೆ)
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!