ಅವರಿಬ್ಬರೂ ತುಂಬಾ ದಿನಗಳಿಂದ ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರಿಗೂ ಚಹಾ ಎಂದರೆ ಪಂಚಪ್ರಾಣ. ಚಹಾ ಇಲ್ಲದೆ ನಾವಿಲ್ಲ ಎಂಬುವಂತಿದ್ದರು ಯಾವುದೋ ಕೆಟ್ಟ ಘಳಿಗೆಯಲ್ಲಿ ಒಂದು ಸಣ್ಣ ವಿಚಾರಕ್ಕೆ ಅವರಿಬ್ಬರ ನಡುವೆ ಮನಸ್ತಾಪ ಮೂಡಿತು.ಅದು ಬೆಳೆಯುತ್ತಾ ಅವರಿಬ್ಬರ ನಡುವೆ ಅಗಾಧ ಕಂದರ ಏರ್ಪಟ್ಟಿತು.

ಒಮ್ಮೆ ಯಾವುದೋ ಶುಭ ಸಂದರ್ಭದಲ್ಲಿ ಇವನು ತನ್ನ ಮನೆಯಲ್ಲಿ ಚಹಾ ಕೂಟ ಏರ್ಪಡಿಸಿದ್ದನು. ಸೌಜನ್ಯಕ್ಕೆಂಬಂತೆ ಆ ಕೂಟಕ್ಕೆ ಅವನನ್ನು ಸಹ ಆಹ್ವಾನಿಸಿದನು. ಅವನು ಸಹ ದ್ವೇಷ ಮರೆತು ಬಂದನು. ಅಲ್ಲಿ ಅವನು ಚಹಾ ಸೇವಿಸಿದ ಸ್ವಲ್ಪ ಸಮಯದ ನಂತರ ತನ್ನ ಕೊನೆಯುಸಿರೆಳೆದನು.!

ಕೊನೆಗೂ ಇವನು ತನ್ನ ದ್ವೇಷ ತೀರಿಸಿಕೊಳ್ಳಲು ಅವನ ಚಹಾದಲ್ಲಿ ಯಾರಿಗೂ ತಿಳಿಯದಂತೆ ವಿಷ ಬೆರೆಸಿದ ವಿಷಯ ಕೊನೆಯವರೆಗೂ ಯಾರಿಗೂ ತಿಳಿಯಲೇ ಇಲ್ಲ 

-ಸಂಪಿಗೆ ವಾಸು ಬಳ್ಳಾರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ