ಹೊಗೆ ಹಾಕುವ ವಿಧಾನದಲ್ಲಿ ಹಲವಾರು ಬಗೆಯ ಕೀಟಗಳನ್ನು ದೂರ ಮಾಡಬಹುದು. ತೋಟಗಾರಿಕಾ ಬೆಳೆಗಳಾದ ಮಾವು, ಗೇರು, ಅಡಿಕೆ ಮುಂತಾದ ಬೆಳೆಗಳಿಗೆ ಬರುವ ಸಾಮಾನ್ಯ ಕೀಟಗಳನ್ನು ಹೊಗೆ ಹಾಕಿ ನಿಯಂತ್ರಣ ಮಾಡಲು ಸಾಧ್ಯ. ಅದಕ್ಕಾಗಿ ಹೊಲದಲ್ಲಿ ಗಾಳಿ ಚಲಿಸುವ ದಿಕ್ಕಿಗನುಗುಣವಾಗಿ ಚಿತ್ರದಲ್ಲಿ ತೋರಿಸಿರುವಂತೆ ಹೊಗೆ ಹಾಕಬಹುದು. ಇಲ್ಲವೇ ಕೃಷಿ ತ್ಯಾಜ್ಯಗಳನ್ನು ರಾಶಿ ಹಾಕಿ ಅದಕ್ಕೆ ಬೆಂಕಿ ಕೊಟ್ಟು ಹೊಗೆ ಬರುವಂತೆ ಮಾಡಬಹುದು. ಹೊತ್ತಿ ಉರಿದಾಗ ಹೊಗೆ ಕಡಿಮೆ. ಅದಕ್ಕೆ ಆಲ್ಪ ಸ್ವಲ್ಪ ನೀರು ಚಿಮುಕಿಸಿ ಹೊಗೆಯಾಡುವಂತೆ ಮಾಡಬೇಕು.
(ಮಾಹಿತಿ : ರಾಧಾಕೃಷ್ಣ ಹೊಳ್ಳ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!