ತೀರ್ಥಯಾತ್ರೆ

'ಸಾಕು ಸುಮ್ಮಿರಿ ಅತ್ತೇ .. ತೀರ್ಥಯಾತ್ರೆಗೆ ಹೋಗಿ ಅಲ್ಲಿ ಸ್ನಾನ ಮಾಡಿದೆ, ಇಲ್ಲಿ ಕುಳಿತೆ, ಅಲ್ಲಿ ಮಲಗಿದೆ ಅಂತ ಹೇಳ್ಕೊಂಡು ಎಷ್ಟೊಂದು ಬೀಗ್ತಿದ್ದೀರಿ,' ಸೊಸೆ ತಕರಾರು ಮಾಡಿದಳು .

ಅತ್ತೆ ಬಿಡಲಿಲ್ಲ.. 'ಬೀಗದೆ ಏನೇ.. ಅಲ್ಲೆಲ್ಲಾ ಹೋಗಿ ಪುಣ್ಯ ಸಂಪಾದನೆ ಮಾಡಿದ್ದು ನಾನು..

ಹೌದಲ್ವಾ' 'ಸಾಕು ಸಾಕು... ನಿಮ್ಮಗ ದಿನಾ ಸಂಜೆ ತೀರ್ಥ ಯಾತ್ರೆ ಮುಗಿಸಿ ಬಂದಿರ್ತಾರೆ... ಆ ಗಟಾರದಲ್ಲಿ ಬಿದ್ದೆ. ಈ ಮೋರಿಯಿಂದ ಎದ್ದೆ.. ರಸ್ತೆಯ ಉದ್ದಗಲ ಅಳೆದೆ ಅಂತ ಹೇಳ್ಕೊಂಡು ಮೆರೀತಾರಾ ಹೇಳಿ ?!'

ಸೊಸೆಯ ಮುಂದೆ ಮತ್ತೆಂದೂ ಯಾತ್ರೆಯ ಸುದ್ದಿ ಅತ್ತೆ ತೆಗೀಲೇ ಇಲ್ಲ!

***

ಹೃದಯ ಸಮಸ್ಯೆ

'ಡಾಕ್ಟೇ... ಇವರಿಗೇನಾಗಿದೆ ?' ಚಿಂತೆಯ ಎಲ್ಲಾ ಗೆರೆಗಳು ಅವಳ ಮುಖದಲ್ಲಿ ಒಂಥರಾ ರುದ್ರ ನರ್ತನ ಮಾಡುತ್ತಿದ್ದವು !

'ಹೃದಯದ ಕಾಯಿಲೆ ಕಣಮ್ಮಾ.. ಬಹಳ ಸಮಯದಿಂದ ಇದ್ದಂತಿದೆಯಲ್ಲಮ್ಮಾ !' ಡಾಕ್ಟ್ರು ಕರುಣಾಪೂರಿತ ನುಡಿ ನುಡಿದರು.

'ಓಹ್ ಹೌದಾ ? ಈಗ ನೆಮ್ಮದಿ ಆಯ್ತು ! ಮದುವೆಯಾಗಿ ಇಷ್ಟು ವರ್ಷಗಳಾದರೂ ಇವರು ಹೃದಯಪೂರ್ವಕವಾಗಿ ನನ್ನ ಇಷ್ಟ ಪಟ್ಟಿಲ್ಲದ ಕಾರಣ ಈಗ ತಿಳೀತು ! ಪಾಪ, ಸುಮ್ಮನೇ ಅವರ ಮೇಲೆ ರೇಗುತ್ತಿದ್ದೆ,' ಡಾಕ್ಟರ್ ಕಡೆಯಿಂದ ನೋಟ ಗಂಡನ ಕಡೆ ತಿರುಗಿಸಿ ಅಂದಳು, 'ಕ್ಷಮಿಸಿ ರೀ... ಇನ್ನೇಲೆ ರೇಗಲ್ಲ ಕಣೋ !'

***

ಸಂಶಯ

ಆಫೀಸಿಗೆ ಹೊಸದಾಗಿ ಬಂದ ಮಹಿಳಾ ಸೆಕ್ರೆಟರಿ ತನ್ನ ಬಾಸ್‌ಗೆ ಹೀಗೆ ಕೇಳಿದಳು.

ಸೆಕ್ರೆಟರಿ: ನಿಮ್ಮ ಪತ್ನಿ ನನ್ನನ್ನು ತುಂಬಾ ಸಂಶಯದಿಂದ ನೋಡುತ್ತಾರೆ, ಯಾಕೆ?

ಬಾಸ್: (ಒಂದು ದೀರ್ಘ ನಿಟ್ಟುಸಿರು ಬಿಟ್ಟು) ನಿನಗಿಂತ ಮೊದಲು ಅವಳೇ ನನ್ನ ಪರ್ಸನಲ್ ಸೆಕ್ರೆಟರಿಯಾಗಿದ್ದಳು.

***

ಸಂತೋಷ

ಪುರುಷ: ನನಗೆ ಡೈವರ್ಸ್ ಆದ ಪತ್ನಿಯೊಂದಿಗೆ ಮತ್ತೆ ಮದುವೆ ಆಗುವ ಆಸೆ ಆಗುತ್ತಿದೆ.

ವಕೀಲ: ನೀನು ನಿನ್ನ ಪತ್ನಿಯಿಂದ ಡೈವರ್ಸ್ ಪಡೆದು ಕೇವಲ ಹದಿನೈದು ದಿನಗಳು ಮಾತ್ರ ಆಗಿವೆ. ಆಗಲೇ ಈ ರೀತಿ ಮನಸ್ಸು ಬದಲಾಯಿತೇ?

ಪುರುಷ: ಡೈವೊರ್ಸ್ ಪಡೆದು ಅವಳು ತುಂಬ ಸಂತೋಷದಿಂದ ಇದ್ದಾಳೆ. ಅದನ್ನು ನನಗೆ ಸಹಿಸಿಕೊಳ್ಳಲಾಗುತ್ತಿಲ್ಲ !

***

ಖರ್ಚು

ಶ್ರೀಮತಿ: ನೀವು ಕುಡಿಯುವುದಕ್ಕಾಗಿ ತುಂಬಾ ಖರ್ಚು ಮಾಡುತ್ತೀರಿ, ದಯವಿಟ್ಟು ನಿಲ್ಲಿಸಿ,

ಸೂರಿ: ನೀನು ತಿಂಗಳಿಗೆ ಐವತ್ತು ಸಾವಿರ ರೂಪಾಯಿಯನ್ನು ಬ್ಯೂಟಿ ವಾರ್ಲರ್ ಗೆ ಖರ್ಚು ಮಾಡಲ್ಲವೇ?

ಶ್ರೀಮತಿ: ಅಯ್ಯೋ, ಅದೆಲ್ಲವೂ ನಿಮಗಾಗಿಯೇ... ನಾನು ಸುಂದರವಾಗಿ ಕಾಣಿಸಿಕೊಂಡು ನಿಮ್ಮನ್ನು ಸಂತೋಷ-ಪಡಿಸಲು ಪಾರ್ಲರ್ ಗೆ ಹೋಗುತ್ತಿರುವೆ.

ಸೂರಿ: ಅಯ್ಯೋ ಹುಚ್ಚಿ, ನೀನು ಸುಂದರವಾಗಿ ಕಾಣಬೇಕೆಂದೇ ನಾನು ಕುಡಿತಕ್ಕಾಗಿ ಅಷ್ಟೊಂದು ಹಣ ಖರ್ಚು ಮಾಡುತ್ತೇನೆ.

***

ತಂಗಿ

ಶ್ರೀಮತಿ: ಫೋನಿನಲ್ಲಿ ತುಂಬಾ ಕೆಳದನಿಯಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದೀರಿ?

ಸೂರಿ: ತಂಗಿಯೊಂದಿಗೆ

ಶ್ರೀಮತಿ: ಅವಳೊಂದಿಗೆ ಅಷ್ಟೊಂದು ಮೆಲುದನಿಯಲ್ಲಿ ಮಾತನಾಡುವ ಅವಶ್ಯಕತೆ ಏನಿದೆ?

ಸೂರಿ: ಏಕೆಂದರೆ ಮಾತಾಡುತ್ತಿರುವುದು ನನ್ನ ತಂಗಿಯಲ್ಲ, ನಿನ್ನ ತಂಗಿ,

***

ಸೂರಿ: ನೆರೆಮನೆಯವನ ಹೆಂಡತಿ ತವರಿಗೆ ಹೋಗಿ, ವಾಪಸ್ ಬಂದಿಲ್ಲ. ಈ ಬಗ್ಗೆ ದೂರು ತೆಗೆದುಕೊಳ್ಳಿ ಸರ್. 

ಪೋಲೀಸ್: ನೆರೆಮನೆಯವನ ಹೆಂಡತಿ ತವರಿಗೆ ಹೋಗಿ, ವಾಪಸ್ ಬರದಿದ್ದರೆ ನಿನಗೇನು? ನೀನ್ಯಾಕೆ ದೂರು ಕೊಡಲು ಬಂದಿರುವೆ?

ಸೂರಿ: ಆಕೆ ತವರು ಸೇರಿದ ಮೇಲೆ ನೆರೆಮನೆಯವನು ಪಾರ್ಟಿಯ ಮೇಲೆ ಪಾರ್ಟಿ ಮಾಡುತ್ತಿದ್ದಾನೆ. ಸಂತೋಷದಿಂದಿದ್ದಾನೆ. ಅದನ್ನು ಕಂಡು ನನ್ನ ಹೊಟ್ಟೆ ಉರಿಯುತ್ತಿದೆ. ಅದಕ್ಕೇ ದೂರು ಕೊಡಲು ಬಂದಿರುವೆ. ದಯವಿಟ್ಟು ಆಕೆಯನ್ನು ಕರೆಸಿ ಸರ್!

*** 

ಮಗ: ಅಪ್ಪ ಕುಡುಕ ಎಂದರೆ ಯಾರು?

ತಂದೆ: ನೋಡು ಪುಟ್ಟ, ಎದುರಿಗೆ ನಾಲ್ಕು ಕಾರುಗಳು ನಿಂತಿವೆಯಲ್ಲ ಅವು ಯಾರಿಗೆ ಎಂಟಾಗಿ ಕಾಣುತ್ತವೆಯೋ ಅವನೇ ಕುಡುಕ.

ಮಗ: ಅಪ್ಪ ಅಲ್ಲಿ ಎರಡೇ ಕಾರು ನಿಂತಿವೆಯಲ್ಲಾ !

(ಸಂಗ್ರಹ) 

ಚಿತ್ರ ಕೃಪೆ: ಅಂತರ್ಜಾಲ ತಾಣ