ವಿದೇಶಕ್ಕೆ ಹೋಗುವಾಗ ನೀವು ಮೊದಲು ಯೋಚಿಸಬೇಕಾದ ಪ್ರಮುಖ ವಿಷಯಗಳಲ್ಲಿ ಒಂದು ಮೊಬೈಲ್ ಸಂಪರ್ಕ. ಇಂಟರ್ನೆಟ್ ಇಲ್ಲದೆ ನ್ಯಾವಿಗೇಷನ್, ಹೋಟೆಲ್ ಬುಕಿಂಗ್, ಕುಟುಂಬದೊಂದಿಗೆ ಸಂಪರ್ಕ ಅಥವಾ ತುರ್ತು ಸಂದರ್ಭಗಳು ಕಷ್ಟಕರವಾಗಬಹುದು. ಭಾರತದಿಂದ ವಿದೇಶಕ್ಕೆ ಹೋಗುವವರು ಸಾಮಾನ್ಯವಾಗಿ ತಮ್ಮ ಸಿಮ್‌ಗೆ ಇಂಟರ್ನ್ಯಾಷನಲ್ ರೋಮಿಂಗ್ ರೀಚಾರ್ಜ್ ಮಾಡಿಸುತ್ತಾರೆ ಅಥವಾ ಮಾಡಿಸದೆ ಹೋಗುತ್ತಾರೆ. ಆದರೆ ಎರಡೂ ಸಂದರ್ಭಗಳಲ್ಲಿ ಸಮಸ್ಯೆಗಳಿವೆ.

ಇಂಟರ್ನ್ಯಾಷನಲ್ ರೋಮಿಂಗ್ ಏಕೆ ದುಬಾರಿ? : ಭಾರತೀಯ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಅಥವಾ ವಿ (Vi) ಯ ಇಂಟರ್ನ್ಯಾಷನಲ್ ರೋಮಿಂಗ್ ಪ್ಯಾಕ್‌ಗಳು ಸಾಮಾನ್ಯವಾಗಿ ದುಬಾರಿ. ಉದಾಹರಣೆಗೆ:

* ಒಂದು ದಿನದ ಪ್ಯಾಕ್‌ಗಳು ೫೦೦ - ೭೦೦ ರೂ. ವರೆಗೆ ಇರುತ್ತವೆ, ಆದರೆ ಕೇವಲ ೫೦೦ ಎಂಬಿ ಡೇಟಾ ಮತ್ತು ಸೀಮಿತ ಕಾಲ್‌ಗಳು ಸಿಗುತ್ತವೆ.

* ಒಂದು ತಿಂಗಳ ಪ್ಯಾಕ್ ಸುಮಾರು ೩೦೦೦.೦೦ ರೂ, ೫ ಜಿಬಿ ಡೇಟಾ ಮತ್ತು ಸೀಮಿತ ಕಾಲ್‌ಗಳೊಂದಿಗೆ.

* ರೋಮಿಂಗ್ ಆನ್ ಮಾಡದಿದ್ದರೆ, ಇನ್‌ಕಮಿಂಗ್ ಕಾಲ್‌ಗಳಿಗೆ ಸಹ ಹೆಚ್ಚಿನ ಚಾರ್ಜ್ ಬೀಳುತ್ತದೆ, ಮತ್ತು ಡೇಟಾ ಬಳಕೆ ಅತ್ಯಂತ ದುಬಾರಿ.

ಹೀಗಾಗಿ, ಬಹುತೇಕ ಪ್ರಯಾಣಿಕರು ವಿದೇಶದಲ್ಲಿ ಲೋಕಲ್ ಸಿಮ್ ಕಾರ್ಡ್ ಖರೀದಿಸುವುದನ್ನು ಆದ್ಯತೆ ನೀಡುತ್ತಾರೆ. ಇದು ಅಗ್ಗದ್ದು, ಹೆಚ್ಚಿನ ಡೇಟಾ ಮತ್ತು ಉತ್ತಮ ಸ್ಪೀಡ್ ನೀಡುತ್ತದೆ.

ಲೋಕಲ್ ಸಿಮ್ ಖರೀದಿಸುವುದರ ಪ್ರಯೋಜನಗಳು

* ಅಗ್ಗದ ದರ: ಅನ್‌ಲಿಮಿಟೆಡ್ ಇಂಟರ್ನೆಟ್ ಪ್ಯಾಕೇಜ್‌ಗಳು ಸಿಗುತ್ತವೆ. ಉದಾಹರಣೆಗೆ, ಥೈಲ್ಯಾಂಡ್‌ನಲ್ಲಿ ೧೫ ದಿನಗಳ ಅನ್‌ಲಿಮಿಟೆಡ್ ಡೇಟಾ ಸುಮಾರು ೧೦೦೦ - ೧೫೦೦ ರೂ.

* ಹೆಚ್ಚಿನ ಡೇಟಾ: ೩ ದಿನ, ೭ ದಿನ, ೧೫ ದಿನ ಅಥವಾ ೩೦ ದಿನಗಳ ವ್ಯಾಲಿಡಿಟಿ ಪ್ಯಾಕ್‌ಗಳು ಲಭ್ಯ.

* ತ್ವರಿತ ಆಕ್ಟಿವೇಷನ್: ಏರ್‌ಪೋರ್ಟ್‌ನಲ್ಲಿ ಖರೀದಿಸಿದ ಕೆಲವೇ ನಿಮಿಷಗಳಲ್ಲಿ ಸಿಮ್ ಆಕ್ಟಿವ್ ಆಗುತ್ತದೆ.

* ಲೋಕಲ್ ಕಾಲ್‌ಗಳು: ಸೀಮಿತ ಅಥವಾ ಅನ್‌ಲಿಮಿಟೆಡ್ ಲೋಕಲ್ ಕಾಲ್‌ಗಳು ಸಿಗುತ್ತವೆ.

ಗಮನಿಸಿ, ಹಲವು ದೇಶಗಳಲ್ಲಿ (ಥೈಲ್ಯಾಂಡ್, ಟರ್ಕಿ, ಇಂಡೋನೇಷ್ಯಾ, ಭಾರತ ಸಹ) ಸಿಮ್ ಖರೀದಿಸಲು ಪಾಸ್‌ಪೋರ್ಟ್ ಅಗತ್ಯ. ಏರ್‌ಪೋರ್ಟ್‌ನಲ್ಲಿ ಇದು ಸುಲಭವಾಗಿ ಮಾಡಬಹುದು.

ಏರ್‌ಪೋರ್ಟ್‌ನಲ್ಲಿ ಸಿಮ್ ಖರೀದಿಸುವುದು ಹೇಗೆ?: ಬಹುತೇಕ ಅಂತರರಾಷ್ಟ್ರೀಯ ಏರ್‌ಪೋರ್ಟ್‌ಗಳಲ್ಲಿ ಆಗಮನ ಹಾಲ್‌ನಲ್ಲಿ ಅಥವಾ ಬ್ಯಾಗೇಜ್ ಕ್ಲೇಮ್ ಬಳಿ ಸಿಮ್ ಕೌಂಟರ್‌ಗಳು ಇರುತ್ತವೆ. 

ಉದಾಹರಣೆಗಳು:

* ಯುರೋಪ್: ಆರೆಂಜ್, ವೊಡಾಫೋನ್, ಟಿ-ಮೊಬೈಲ್ ಮುಂತಾದವುಗಳು.

* ಯುಎಸ್‌ಎ: ಟಿ-ಮೊಬೈಲ್, ಎಟಿ&ಟಿ, ವೆರೈಜನ್ (ಆದರೆ ಏರ್‌ಪೋರ್ಟ್‌ಗಳಲ್ಲಿ ಸೀಮಿತ, ನಗರದಲ್ಲಿ ಖರೀದಿಸಿ ಉತ್ತಮ).

* ಥೈಲ್ಯಾಂಡ್: ಏಐಎಸ್, ಡಿಟಿಎಸಿ, ಟ್ರೂಮೂವ್ – ಬ್ಯಾಂಕಾಕ್ ಏರ್‌ಪೋರ್ಟ್‌ನಲ್ಲಿ ಅನೇಕ ಕಿಯೋಸ್ಕ್‌ಗಳು.

ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಏರ್‌ಪೋರ್ಟ್‌ನಲ್ಲಿ ಸಿಮ್ ಖರೀದಿ ಸ್ವಲ್ಪ ದುಬಾರಿ ಇರಬಹುದು, ಆದರೆ ಸಮಯ ಉಳಿತಾಯವಾಗುತ್ತದೆ.

ಆಧುನಿಕ ಪರ್ಯಾಯ: eSIM

೨೦೨೫ಲ್ಲಿ eSIM ತಂತ್ರಜ್ಞಾನ ಬಹಳ ಜನಪ್ರಿಯವಾಗಿದೆ. ಇದು ಡಿಜಿಟಲ್ ಸಿಮ್ – ಫಿಸಿಕಲ್ ಸಿಮ್ ಬದಲಿಸುವ ಅಗತ್ಯವಿಲ್ಲ.

ಪ್ರಯೋಜನಗಳು:

* ಪ್ರಯಾಣಕ್ಕೆ ಮೊದಲೇ ಆನ್‌ಲೈನ್‌ನಲ್ಲಿ ಖರೀದಿಸಿ ಆಕ್ಟಿವೇಟ್ ಮಾಡಿ.

* ಏರ್‌ಪೋರ್ಟ್ ಕ್ಯೂ ತಪ್ಪಿಸಿ.

* ಮಲ್ಟಿಪಲ್ ಪ್ರೊಫೈಲ್‌ಗಳು ಸ್ಟೋರ್ ಮಾಡಬಹುದು.

* ಹಲವು ದೇಶಗಳಿಗೆ ರೀಜಿಯನಲ್ ಪ್ಯಾಕ್‌ಗಳು (ಯುರೋಪ್, ಏಷ್ಯಾ).

ಏರಾಲೋ, ನೊಮಾಡ್, ಹೊಲಾಫ್ಲೈ, ಸೈಲಿ ಮುಂತಾದ ಕಂಪೆನಿಗಳು ಅಗ್ಗದ ಪ್ಯಾಕ್‌ಗಳನ್ನು ನೀಡುತ್ತವೆ. ನೀವು ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿಯೆಂದರೆ ನಿಮ್ಮ ಫೋನ್ eSIM ಸಪೋರ್ಟ್ ಮಾಡುತ್ತದೆಯೋ? ಇಲ್ಲವೋ? ಎನ್ನುವ ವಿಷಯ. ಹೊಸ ಐಫೋನ್, ಸ್ಯಾಮ್‌ಸಂಗ್ ಮಾಡೆಲ್‌ಗಳು eSIM ಸಪೋರ್ಟ್ ಮಾಡುತ್ತವೆ.

ವಿದೇಶ ಪ್ರಯಾಣದಲ್ಲಿ ಕೆಲವು ಪ್ರಮುಖ ಸಲಹೆಗಳು

* ಫೋನ್ ಅನ್‌ ಲಾಕ್ ಆಗಿರಲಿ.

* ಪಾಸ್‌ಪೋರ್ಟ್ ಜೊತೆಯಲ್ಲಿ ಇರಲಿ.

* eSIM ಪರ್ಯಾಯ ಪರಿಗಣಿಸಿ – ಇದು ಹೆಚ್ಚು ಸುಲಭ ಮತ್ತು ಅಗ್ಗ.

* ವೈಫೈ ಇರುವಲ್ಲಿ ಮೊದಲು eSIM ಆಕ್ಟಿವೇಟ್ ಮಾಡಿ.

ವಿದೇಶ ಪ್ರಯಾಣ ಸುಗಮವಾಗಿರಲಿ. ಸಂಪರ್ಕದಲ್ಲಿ ಇದ್ದು, ಸುರಕ್ಷಿತವಾಗಿ ಪ್ರಯಾಣಿಸಿ. ನೆನಪಿರಲಿ, ನೀವು ವಿದೇಶ ಪ್ರಯಾಣ ಹೋಗಿರುವುದು ಅಲ್ಲಿಯ ವಿಷಯಗಳನ್ನು ತಿಳಿಯಲು, ಪ್ರೇಕ್ಷಣೀಯ ಸ್ಥಳಗಳನ್ನು ಆನಂದಿಸಲು, ರುಚಿಕರ ಖಾದ್ಯಗಳನ್ನು ಸವಿಯಲು, ಅಲ್ಲಿಯ ಜನರ ಆಚಾರ ವಿಚಾರ, ಉಡುಗೆ ತೊಡುಗೆಗಳನ್ನು ಗಮನಿಸಲು. ಆದುದರಿಂದ ಪ್ರಯಾಣವನ್ನು ಪ್ರಯಾಸದಾಯಕವಾಗುವಂತೆ ಮಾಡಬೇಡಿ. ಆನಂದಮಯವಾಗಿ ದಿನಗಳನ್ನು ಕಳೆಯಿರಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ