ಹಲ್ಲುಗಳ ಆರೋಗ್ಯಕ್ಕೆ ಟೂತ್ ಪೇಸ್ಟ್ ಗಿಂತ ನೈಸರ್ಗಿಕವಾಗಿ ಸಿಗುವ ಬೇವು ಮತ್ತು ಆಕೇಶಿಯಾದ ಕಡ್ಡಿಗಳನ್ನು ಬಳಸುವುದು ಉತ್ತಮ ಎಂದು ಹೇಳಲಾಗುತ್ತದೆ. ನಮ್ಮ ಹಿರಿಯರು ಬಳಸಿದ ಈ ಕ್ರಮವನ್ನು ಅನುಸರಿಸಿದರೆ ಹಲ್ಲುಗಳು ಆರೋಗ್ಯವಾಗಿರುತ್ತದೆ. ಇದನ್ನು ಬಳಸುವ ವಿಧಾನ ಹೇಗೆ? ಇದರ ಪ್ರಯೋಜಗಳೇನು ಎನ್ನುವುದನ್ನು ನೋಡೋಣ. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಹಲ್ಲುಜ್ಜುವುದು ಇದ್ದೇ ಇರುತ್ತದೆ. ಹೊಳೆಯುವ ಹಲ್ಲಿಗಾಗಿ ಇಲ್ಲ ಸಲ್ಲದ ಟೂತ್‌ ಪೇಸ್ಟ್‌ಗಳನ್ನು ಬಳಸುತ್ತೇವೆ. ಆದರೆ ಇದರಿಂದಲೇ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ದುರ್ಬಲ ಒಸಡುಗಳು ಉಂಟಾಗುತ್ತವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ನಮ್ಮ ಹಿರಿಯರು ಅಂದಿನ ಕಾಲದಲ್ಲಿ ಟೂತ್‌ಪೇಸ್ಟ್‌ಗಳನ್ನು ಬಳಸುತ್ತಿರಲಿಲ್ಲ. ಬದಲಾಗಿ ಬೇವು ಮತ್ತು ಅಕೇಶಿಯಾದ ನೈಸರ್ಗಿಕ ಕಡ್ಡಿಗಳನ್ನು ಬಳಸುತ್ತಿದ್ದರು. ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ಈ ಬೇವು ಮತ್ತು ಅಕೇಶಿಯಾದ ಕಡ್ಡಿಗಳನ್ನು ಬಳಸುತ್ತಿದ್ದಾರೆ. ಅವರ ಹಲ್ಲುಗಳು ಇಂದಿಗೂ ಆರೋಗ್ಯವಾಗಿವೆ. ದಾತುನ್ ಎಂಬುದು ಬೇವು, ಆಕೇಶಿಯಾ ಅಥವಾ ಕಾರಂಜಾ ಮುಂತಾದ ಮರಗಳ ಕಡ್ಡಿಗಳಿಂದ ತಯಾರಿಸಿದ ನೈಸರ್ಗಿಕವಾದ - ಹಲ್ಲುಜ್ಜುವ ಬ್ರಷ್, ಇದನ್ನು ಆಗಿಯುವುದರಿಂದ ಹಲ್ಲು ಸ್ವಚ್ಛಗೊಳ್ಳುತ್ತದೆ. ಒಸಡುಗಳಿಗೆ ಉತ್ತಮ ಮಸಾಜ್ ಆಗುತ್ತದೆ. ಇದರ ಜತೆಗೆ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಹಲ್ಲುಜ್ಜುವ ಬ್ರಷ್‌ಗಳು ಅಥವಾ ರಾಸಾಯನಿಕ ಪೇಸ್ಟ್‌ಗಳು ಇಲ್ಲದಿದ್ದಾಗ, ಈ ದಾತುನ್ ಬಳಸುತ್ತಿದ್ದರು.

ಇದರ ಪ್ರಯೋಜನಗಳು: ನೈಸರ್ಗಿಕ ನಂಜುನಿರೋಧಕ: ಬೇವು ಮತ್ತು ಅಕೇಶಿಯಾದ ಕಹಿ ಕಡ್ಡಿಗಳು ಬ್ಯಾಕ್ಟಿರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿವೆ.

ನೈಸರ್ಗಿಕ ಫ್ಲೋಸಿಂಗ್ : ಇವುಗಳನ್ನು ಅಗಿಯುವುದರಿಂದ ಅದರ ನಾರುಗಳು ಹಲ್ಲುಗಳ ನಡುವೆ ತೂರಿಕೊಂಡು ಸಿಕ್ಕಿಬಿದ್ದ ಆಹಾರ ಮತ್ತು ಪ್ಲೇಕ್ ಅನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ.

ಒಸಡುಗಳನ್ನು ಬಲಪಡಿಸುವುದು: ದಾತುನ್ ಒಸಡುಗಳನ್ನು ನಿಧಾನವಾಗಿ ಮಸಾಜ್ ಮಾಡುತ್ತದೆ. ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಹಾಗೂ ಒಸಡುಗಳನ್ನು ಬಲಪಡಿಸುತ್ತದೆ. ನಿಯಮಿತ ಬಳಕೆಯಿಂದ, ಹಲ್ಲುಗಳ ಹಳದಿ ಬಣ್ಣವೂ ಹೋಗುತ್ತದೆ. ಈ ಕಡ್ಡಿಗಳು ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ. ಬೆಳಿಗ್ಗೆ ಬೇವು ಅಥವಾ ಆಕೇಶಿಯಾದ ತೆಳುವಾದ ಕಡ್ಡಿಯನ್ನು ತೆಗೆದುಕೊಳ್ಳಿ. ಅದರ ಒಂದು ತುದಿಯನ್ನು ಆಗಿಯಿರಿ, ಅದನ್ನು ನಾರಿನಂತೆ ಮಾಡಿ. ನಂತರ ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿ ಮತ್ತು ಒಸಡುಗಳಿಗೆ ಮಸಾಜ್ ಮಾಡಿ. ದಿನಕ್ಕೆ ಒಮ್ಮೆ ಬಳಸಿದರೆ ಸಾಕು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ