ಚಳಿಗಾಲ ಪ್ರಾರಂಭವಾದ ಕೂಡಲೇ ಎಳೆಯ ಬಟಾಣಿ ಕೋಡುಗಳು ಮಾರುಕಟ್ಟೆಗೆ ಬರುತ್ತವೆ. ಈ ಸುಲಿದ ಬಟಾಣಿಗಳಿಂದ ಮಾಡಿದ ಪದಾರ್ಥ ಬಹಳ ರುಚಿಕರವಾಗಿರುತ್ತವೆ. ಆದರೆ ಚಳಿಗಾಲದ ಸಮಯದಲ್ಲಷ್ಟೇ ಸಿಗುವ ಈ ಬಟಾಣಿಗಳನ್ನು ವರ್ಷವಿಡೀ ಸಂಗ್ರಹಿಸಿ ಇಡಲು ಸಾಧ್ಯವಿದೆ. ಚಳಿಗಾಲದ ಬಟಾಣಿಗಳು ರುಚಿಕರವಾಗಿರುವುದಲ್ಲದೆ, ಪೌಷ್ಟಿಕಾಂಶದಿಂದ ಕೂಡ ಸಮೃದ್ಧವಾಗಿವೆ. ಆದರೆ ಜನರು ಆವುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡುವುದು ಹೇಗೆ ಎಂದು ಚಿಂತಿಸುತ್ತಾರೆ. ಆದರೆ ಚಿಂತಿಸಬೇಡಿ. ನೀವು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದರೂ ಅಥವಾ ಸಂಗ್ರಹಿಸದಿದ್ದರೂ ಕೆಲವು ಸರಳ ಮನೆ ಉಪಾಯಗಳೊಂದಿಗೆ ತಿಂಗಳುಗಟ್ಟಲೇ ಸಂರಕ್ಷಿಸಬಹುದು.

ಮೊದಲು ಬಟಾಣಿ ಸಿಪ್ಪೆ (ಕೋಡು) ತೆಗೆದು ಶುದ್ಧ ನೀರಿನಿಂದ ತೊಳೆಯಿರಿ. ನೀರನ್ನು ಕುದಿಸಿ. ಇದಕ್ಕೆ 2-3 ನಿಮಿಷಗಳ ಕಾಲ ಬಟಾಣಿ ಸೇರಿಸಿ. ನಂತರ ಅದನ್ನು ತಣ್ಣನೆಯ (ಐಸ್) ನೀರಿನಲ್ಲಿ ಹಾಕಿ ತಕ್ಷಣ ತಣ್ಣಗಾಗಿಸಿ. ಈ ಬಟಾಣಿಗಳನ್ನು ಬಟ್ಟೆಯ ಮೇಲೆ ಹರಡಿ ಲಘುವಾಗಿ ಒಣಗಿಸಿ. ಗಾಳಿಯಾಡದ ಡಬ್ಬಿಯಲ್ಲಿ ಅಥವಾ ಜಿಪ್ ಲಾಕ್ ಬ್ಯಾಗ್‌ನಲ್ಲಿ ಸಂಗ್ರಹಿಸಿ ಡೀಪ್ ಫ್ರೀಜರ್‌ನಲ್ಲಿ ಇರಿಸಿ.

ಈ ರೀತಿಯಾಗಿ ಬಟಾಣಿಗಳನ್ನು ಸಂಗ್ರಹಿಸುವುದರಿಂದ ೮-೧೨ ತಿಂಗಳುಗಳವರೆಗೆ ತಾಜಾವಾಗಿರುತ್ತವೆ. ಬಟಾಣಿಗಳನ್ನು ಮೊದಲನೇಯ ಹಂತದಲ್ಲಿ ಹೇಳಿದ ಹಾಗೆ ಮಾಡಿ. ಫ್ರೀಜ್ ಮಾಡುವುದರಿಂದ ಅವುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದ್ದು ಬಟಾಣಿಗಳು ತಮ್ಮ ಬಣ್ಣ, ಸುವಾಸನೆ ಮತ್ತು ತಾಜಾತನವನ್ನು ಒಂದು ವರ್ಷದವರೆಗೆ ಉಳಿಸಿಕೊಳ್ಳುತ್ತವೆ.

ರೆಫ್ರಿಜರೇಟರ್ ಇಲ್ಲದಿದ್ದಲ್ಲಿ : ಬಟಾಣಿಗಳನ್ನು ೨-೩ ದಿನಗಳವರೆಗೆ ಬಿಸಿಲಿನಲ್ಲಿ ಹರಡಿ. ಸಂಪೂರ್ಣವಾಗಿ ಒಣಗಿದ ನಂತರ, ಅವುಗಳನ್ನು ಬಟ್ಟೆಯ ಚೀಲ ಅಥವಾ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ. ಈ ವಿಧಾನವು ಬಟಾಣಿಗಳನ್ನು ೨-೩ ತಿಂಗಳುಗಳವರೆಗೆ ಸುರಕ್ಷಿತವಾಗಿರಿಸುತ್ತದೆ. ನೀರಿಗೆ ಸ್ವಲ್ಪ ಅರಿಶಿನ ಸೇರಿಸಿ. ಸಿಪ್ಪೆ ಸುಲಿದ ಬಟಾಣಿಗಳನ್ನು ಈ ನೀರಿನಲ್ಲಿ ನೆನೆಸಿ. ಈ ವಿಧಾನವು ಕೇವಲ ಒಂದು ರಾತ್ರಿ (೧೨ ಗಂಟೆಗಳ ಕಾಲ) ಹಾಳಾಗುವುದನ್ನು ತಡೆಯುತ್ತದೆ. ಇದು ಬಟಾಣಿಗಳನ್ನು ಮೃದುಗೊಳಿಸುತ್ತದೆ ಆದರೆ ಅವು ಹಾಳಾಗದಂತೆ ನೋಡಿಕೊಳ್ಳುತ್ತದೆ.

ಶೀತ ವಾತಾವರಣದಲ್ಲಿ: ೧-೨ ದಿನಗಳು ತಾಜಾ ಉಳಿಯುತ್ತವೆ. ಬಿಸಿ ವಾತಾವರಣದಲ್ಲಿ ೧೦-೧೨ ಗಂಟೆಗಳು ಉಳಿದರೂ ವಿಪರೀತ ಶಾಖವಿದ್ದಲ್ಲಿ ಬೇಗನೆ ಹಾಳಾಗಲು ಪ್ರಾರಂಭಿಸುತ್ತವೆ. ಆದ್ದರಿಂದ ಅವುಗಳನ್ನು ಸಂಗ್ರಹಿಸಿ ತ್ವರಿತವಾಗಿ ಆಹಾರದಲ್ಲಿ ಬಳಸಿ. ಡೀಪ್ ಫ್ರೀಜ್ ಮಾಡುವುದು ಅತ್ಯಂತ ಪರಿಣಾಮಕಾರಿ ವಿಧಾನ.

ಇದರಿಂದ ಬಣ್ಣವನ್ನು ಕಳೆದುಕೊಳ್ಳುವುದಿಲ್ಲ. ಪರಿಮಳವನ್ನು ಉಳಿಸಿಕೊಳ್ಳುತ್ತದೆ. ಕೀಟ ನಿರೋಧಕವಾಗಿರುತ್ತದೆ ಮತ್ತು ವರ್ಷಪೂರ್ತಿ ಬಳಸಬಹುದು. ನಿಮ್ಮ ಅಡುಗೆ ಮನೆಯಲ್ಲಿ ವರ್ಷಪೂರ್ತಿ ತಾಜಾ ಚಳಿಗಾಲದ ಎಳೆಯ ಬಟಾಣಿಗಳು ಬೇಕಾದರೆ ಅವುಗಳನ್ನು ಸಂಗ್ರಹ ಮಾಡಿ  ಡೀಪ್ ಫ್ರೀಜರ್‌ನಲ್ಲಿ ಸಂಗ್ರಹಿಸುವುದು ಉತ್ತಮ ಮಾರ್ಗವಾಗಿದೆ. ಆದರೆ ಕೆಲವು ಸರಳ ಮನೆ ಉಪಾಯಗಳಿಂದ ರೆಫ್ರಿಜರೇಟರ್ ಇಲ್ಲದೆಯೂ ಕೆಲವು ದಿನಗಳವರೆಗೆ ಸಂಗ್ರಹಿಸಬಹುದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ