ಚೀನಿಕಾಯಿಯ ಸಿಪ್ಪೆ, ತಿರುಳನ್ನು ತೆಗೆದು ತೆಳುವಾದ ಬಿಲ್ಲೆಗಳಂತೆ ಕತ್ತರಿಸಿಟ್ಟುಕೊಳ್ಳಿ. ಅಕ್ಕಿಯನ್ನು ಎರಡು ಮೂರು ಗಂಟೆಗಳ ಕಾಲ ನೆನೆಸಿಟ್ಟು ಇಲ್ಲಿ ಹೇಳಿದ ಎಲ್ಲಾ ಸಾಮಾನುಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ನಂತರ ಹೆಂಚನ್ನು ಒಲೆಯ ಮೇಲಿಟ್ಟು ಎಣ್ಣೆ ಸವರಿ ಒಂದೊಂದೇ ಬಿಲ್ಲೆಯನ್ನು ಮೇಲಿಡುತ್ತಾ ಮೇಲೆ ಸ್ವಲ್ಪ ಎಣ್ಣೆ ಸವರಿ, ನಿಧಾನ ಬೆಂಕಿಯಲ್ಲಿ ಹೊಂಬಣ್ಣ ಬರುವವರೆಗೆ ಬೇಯಿಸಬೇಕು. ತಿರುಗಿಸಿ ಹಾಕಿ. ಮತ್ತೊಮ್ಮೆ ಬೇಯಿಸಿ. ಬಿಸಿ ಬಿಸಿ ದೋಸೆ ಮೇಲೆ ಬೆಣ್ಣೆ, ಬೇಕಿದ್ದರೆ ಚಟ್ಟಿ ಜೊತೆ ಬೆಳಗಿನ ಫಲಾಹಾರಕ್ಕೆ ತಿನ್ನಬಹುದು.

-ಪುಷ್ಪಾ ಎನ್ ಕೆ ರಾವ್