ಮೊನ್ನೆ ನಮ್ಮ ಫ್ರೆಂಡ್ ಹೇಳುತ್ತಿದ್ದಾರೆಂದು ನಾನು 2೦ ವರ್ಷದ ಹಿಂದೆ ಒಂದು 30 x 40 ಸೈಟ್ ಎಂಬತ್ತು ಸಾವಿರಕ್ಕೆ ತೊಗೊಂಡಿದ್ದೆ, ಈಗ ಇಪ್ಪತ್ತೈದು ಲಕ್ಷಕ್ಕೆ ಮಾರಾಟ ಮಾಡಿದ್ಯಾ ಅಂತ ಹಿಂಗ ಇನ್ನೊಬ್ಬರು ಮಾತಾಡುತಿದ್ರು. ಐದು ವರ್ಷದ ಹಿಂದೆ ಎಸ್‌ ಜಿ ಬಿ ಅಂದ್ರ ಕೇಂದ್ರ ಸರ್ಕಾರದ ಸಾವರಿನ ಗೋಲ್ಡ್ ಬಾಂಡ್ ಸ್ಕೀಮ್ ಲ್ಲಿ ಅಥವಾ ಬಂಗಾರದ ಅಂಗಡಿಯಲ್ಲಿ ಸುಮಾರು 46 ಸಾವಿರಕ್ಕೆ 10 ಗ್ರಾಂ ಬಂಗಾರ ತೊಗೊಂಡಿದ್ವಿ. ಈಗ 10 ಗ್ರಾಂ ಬಂಗಾರಕ್ಕೆ ಒಂದು ಲಕ್ಷಕ್ಕೂ ಹೆಚ್ಚಿಗೆ ಆಗೇತಿ ಅಂತ. ಹೀಗೆ ನಾವು ಬಹಳಷ್ಟು ಜನರಿಂದ ಇಂತಹ ಮಾತುಗಳನ್ನ ಕೇಳತಿರತೀವಿ ಇದಕ್ಕೆ ನಾವು ಸಾಮಾನ್ಯವಾಗಿ ದುಡ್ಡಿನ ಮೋಡಿ ಅನ್ನಬಹುದು. ಅಂದರೆ ಈಗಿನ ದಿನಗಳಲ್ಲಿ ನಾವು ತೊಡಗಿಸಿದ ಹಣ ಬಹಳಷ್ಟು ಬೆಳೆದಿದೆ. ಎನ್ನುವ ಭ್ರಮೆಯಲ್ಲಿರುತ್ತೇವೆ.

ಆದರೆ ಈ ಎರಡೂ ಮೇಲಿನ ಉದಾಹರಣೆಗಳನ್ನು ನಾವು ನೋಡಿದಾಗ ಅ ಸಮಯದಲ್ಲಿ ಆ ಹಣದ ಮೌಲ್ಯ ಅಷ್ಟೇ ಇತ್ತು. ಈಗಲೂ ಆ ಮೊತ್ತಕ್ಕೆ ಅವರು ಏನು ಖರೀದಿಸಿದನೋ ಅಷ್ಟೇ ಪ್ರಮಾಣದ ವಸ್ತು ಅಥವಾ ಆಸ್ತಿಯನ್ನು ಖರೀದಿಸಬಹುದು. ಯಾಕೆಂದರೆ ಸೈಟ್ ಮಾರಿದ ವ್ಯಕ್ತಿ.ಅದೇ ಆಳತೆಯ ಸೈಟ್ ಖರೀದಿಸಬೇಕಾದರೆ, ಈಗ ಎಪ್ಪಕ್ಕೆ ಮಾರಿದ್ದಾನೆಯೋ ಅಷ್ಟೇ ಮೊತ್ತವನ್ನು ನೀಡಬೇಕಾಗುತ್ತದೆ. ಅಲ್ಲದೇ 10 ಗ್ರಾಂ ಬಂಗಾರ ಖರೀದಿಗೆ ಅಷ್ಟೇ ಹಣ ನೀಡಿ ಖರೀದಿಸಬೇಕಾಗುತ್ತದೆ. ನಾವು ನಮ್ಮ ಹೂಡಿಕೆಗೆ ಹೆಚ್ಚು ಮೊತ್ತ ಪಡೆದಿದ್ದೇವೆ ಎಂದು ಮೋಡಿಗೆ ಒಳಗಾಗುತ್ತೇವೆ ವಿನಃ ಇಲ್ಲಿ ಏನೂ ಬದಲಾವಣೆ ಕಾಣುವುದಿಲ್ಲ, ಇದಕ್ಕೆ ಅರ್ಥಶಾಸ್ತ್ರದಲ್ಲಿ ಹಣದುಬ್ಬರ ಎನ್ನುತ್ತೇವೆ. ಅಲ್ಲದೇ ಆವಾಗಲೇ ಇನ್ನೂ ಒಂದೋ ಅಥವಾ ಎರಡು ಸೈಟ್ ಹೆಚ್ಚಿಗೆ ಖರೀದಿಸಬೇಕಾಗಿತ್ತು ಅಥವಾ 20 ಅಥವಾ 30 ಗ್ರಾಂ ಹೆಚ್ಚು ಖರೀದಿಸಬೇಕಾಗಿತ್ತು ಅಂತ ಬಹಳಷ್ಟು ಜನ ಪೇಚಾಡುವುದನ್ನು ನೋಡಿರಬಹುದು. ಆದರೆ ಆ ಸಮಯದಲ್ಲಿ ಅಷ್ಟೇ ಹಣ ವಿನಿಯೋಗಿಸುವಷ್ಟು ಸಾಮರ್ಥ್ಯ ಅಥವಾ ವರಮಾನ ಇರುತ್ತೆ ಅನ್ನುವುದು ಗಮನಿಸಬೇಕಾದ ಸಂಗತಿ.

ಯಾವಾಗಲೂ ಜನಸಾಮಾನ್ಯರ ಅದರಲ್ಲೂ ಮಧ್ಯಮ ವರ್ಗದವರ ವರಮಾನ ಹಾಗೂ ಪ್ರಸ್ತುತ ವಿದ್ಯಮಾನಗಳ ಮೇಲೆ ದೇಶದ ಅಥವಾ ಜಾಗತಿಕ ಅರ್ಥ ವ್ಯವಸ್ಥೆಯು ರೂಪುಗೊಳ್ಳುತ್ತದೆ ಎನ್ನುವುದನ್ನು ಮರೆಯಬಾರದು. ಈ ಹಣದುಬ್ಬರವು ನಮ್ಮ ದಿನ ಬಳಕೆಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಕೆಯ ಮೂಲಕ ನಾವು ತಿಳಿಯಬಹುದು. ಹಣದುಬ್ಬರವನ್ನು ಆಯಾ ದೇಶಗಳ ಸರ್ಕಾರ ಮತ್ತು ಕೇಂದ್ರಿಯ ಬ್ಯಾಂಕ್‌ಗಳ ವಿತ್ತೀಯ ನೀತಿ (Monetary Policy) ಮತ್ತು ಹಣಕಾಸಿನ ನೀತಿ (Fiscal Policy) ಮೂಲಕ ನಿಯಂತ್ರಣಕ್ಕೆ ತರುತ್ತಾರೆ.

ವಿತ್ತೀಯ ನೀತಿ ಸಮಿತಿ (Monetary Policy Committee) ನಮ್ಮ ದೇಶದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 2 ತಿಂಗಳಿಗೊಮ್ಮೆ ವಿತ್ತೀಯ ನೀತಿ ಸಮಿತಿಯ ಸಭೆಯ ನಿರ್ಧಾರದ ಆಧಾರದಿಂದ ಈ ರೀತಿಯ ನಿರ್ಣಯಗಳನ್ನು ಕೈಗೊಳ್ಳುತ್ತದೆ. 1. ಬಡ್ಡಿ ದರ ಹೊಂದಾಣಿಕೆ (Interest Rate Adjustment), 2) ಮೀಸಲು ನಿಧಿಯ ಬೇಡಿಕೆ (Reserve Requirements) 3) ಮುಕ್ತ ಮಾರುಕಟ್ಟೆ (Open Market Operations)

ಬಡ್ಡಿದರ ಹೊಂದಾಣಿಕೆಗಳು (Interest Rate Adjustment) ಸಾಲ ಮತ್ತು ಬಡ್ಡಿ ವರಗಳನ್ನು ಹೆಚ್ಚಿಸುವುದಾಂತ ಮಾರುಕಟ್ಟೆಯಲ್ಲಿ ಹಣದ ಪೂಾರೈಕೆಯು ಕಡಿಮೆಯಾಗಿ ಹೆಚ್ಚು ಖರ್ಚು ಕಮ್ಮಿ ಮಾಡಲು ಬ್ಯಾಂಕ್ ಗಳು ಬಡ್ಡಿ ದರಗಳನ್ನು ಹೆಚ್ಚಿಸುವುದರಿಂದ ಮಾರುಕಟ್ಟೆಯಲ್ಲಿ ಹಣದ ಪೂರೈಕೆಯು ಕಡಿಮೆಯಾಗಿ ಹೆಚ್ಚು ಖರ್ಚು ಮಾಡುವುದನ್ನು ತಡೆಯುವ ಮೂಲಕ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುತ್ತದೆ. ಮೀಸಲು ಅಗತ್ಯತೆಗಳು: ಬ್ಯಾಂಕುಗಳ ಮೀಸಲು ನಿಧಿಯನ್ನು   ಹೆಚ್ಚಳ ಮಾಡಿ ಸಾಲ ನೀಡಲು ಲಭ್ಯವಿರುವ ಹಣದ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಇದು ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮುಕ್ತ ಮಾರುಕಟ್ಟೆ ಕಾರ್ಯಾಚರಣೆ: ಆರ್‌ ಬಿ ಐ ಹಣದ ಪೂರೈಕೆಯನ್ನು ನಿಯಂತ್ರಿಸಲು ಸರ್ಕಾರದ ಭದ್ರತಾ ಪತ್ರಗಳನ್ನು ಖರೀದಿಸುತ್ತವೆ ಅಥವಾ ಮಾರಾಟ ಮಾಡುತ್ತವೆ.

ಸರಕಾರಿ ಖರ್ಚುಗಳನ್ನು ಕಡಿಮೆ ಮಾಡುವುದರ ಮೂಲಕ ಒಟ್ಟಾರೆ ಬೇಡಿಕೆಯನ್ನು ಕಡಿಮೆ ಮಾಡಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುತ್ತದೆ. ತೆರಿಗೆಗಳನ್ನು ಹೆಚ್ಚಿಸುವುದರಿಂದ ಖರ್ಚು ಮಾಡುವುದನ್ನು ತಡೆಯುವ ಜೊತೆಗೆ, ಬೇಡಿಕೆಯನ್ನು ತಗ್ಗಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸುತ್ತದೆ. ಇನ್ನು ನಾವು ವೈಯಕ್ತಿಕವಾಗಿ ಹಣದುಬ್ಬರವನ್ನು ಈ ರೀತಿ ನಿಯಂತ್ರಿಸಿಕೊಳ್ಳಬಹುದು.

ನಮ್ಮ ಅವಶ್ಯಕತೆಗಳಲ್ಲಿ ಆದ್ಯತೆಯ ಮೇರೆಗೆ ಖರ್ಚು ಮಾಡುವುದನ್ನು ರೂಢಿಸಿಕೊಳ್ಳುವುದು ಅಗತ್ಯ ನಮ್ಮ ಹೂಡಿಕೆ ಅಥವಾ ಉಳಿತಾಯ ಮುಂದಿನ ದಿನಗಳ ಹಣದುಬ್ಬರವನ್ನು ನಿಭಾಯಿಸುವಷ್ಟು ಮತ್ತು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು. ನಮಗೆ ಏನಾದರೂ ಒಂದಿಡೀ ಮೊತ್ತ ಬಂದರೆ ಅದನ್ನು ನಮ್ಮ ಮುಂದಿನ ಜೀವನೋಪಾಯಕ್ಕೆ ಸಹಕಾರಿಯಾಗುವಂತೆ ಉಳಿತಾಯ ಮಾಡಬೇಕು. ಉದಾಹರಣೆಗೆ ನಮ್ಮ ವಯಸ್ಸಾದ ಕಾಲಕ್ಕೆ ವರಮಾನ ನೀಡುವಂತಹ ಖಚಿತ ಹಾಗೂ ನಿರಂತರವಾಗಿ ನೀಡುವ ಪಿಂಚಣಿ ಯೋಜನೆಗಳಲ್ಲಿ ತೊಡಗಿಸುವುದು. ಜೊತೆಗೆ ಚಿನ್ನದಲ್ಲಿ ಉಳಿತಾಯ ಮಾಡುವುದು. ಕಡಿಮೆ ದರದಲ್ಲಿ ದೊರೆಯುವ ಹಾಗೂ ಮುಂದಿನ ದಿನಗಳಲ್ಲಿ ಬೇಡಿಕೆ ಬರುವ ಸ್ಥಳಗಳಲ್ಲಿ ಸೈಟ್ ಖರೀದಿಸುವ ಯೋಜನೆ ಯುಲಿಪ್ ವಾಲಿಸಿಗಳು ಜೀವ ವಿಮಾ ರಕ್ಷಣೆಯೊಂದಿಗೆ ಹೆಚ್ಚಿನ ನಿವ್ವಳ ಲಾಭವನ್ನು ನೀಡುತ್ತವೆ. ದೀರ್ಘ ಕಾಲದ ಸಾಂಪ್ರದಾಯಿಕ ಜೀವ ವಿಮಾ ಪಾಲಿಸಿಗಳು ಅದರಲ್ಲೂ ಖಚಿತ ಸೇರ್ಪಡೆಯೊಂದಿಗೆ (Guaranteed Addition) ಆದಾಯ ಹಾಗೂ ಇಡೀ ಮೊತ್ತವನ್ನು ನೀಡುವುದರಿಂದ ಆಯಾ ಸಮಯದ ಹಣಕಾಸಿನ ಜವಾಬ್ದಾರಿಗಳನ್ನು ಮತ್ತು ಹಣದುಬ್ಬರವನ್ನು ನಿಭಾಯಿಸಲು ಸಹಕಾರಿಯಾಗಲಿವೆ ಭಾರತೀಯ ಜೀವ ವಿಮಾ ನಿಗಮದ ಜೀವನ್ ಉತ್ಸವ್ ಪಾಲಿಸಿ ಪರ್ಯಂತ ವಿಮಾ ರಕ್ಷಣೆ ನೀಡುವುದರ ಜೊತೆಗೆ ವಾರ್ಷಿಕವಾಗಿ ನಿರಂತರ ಮತ್ತು ಖಚಿತ ಆದಾಯ ನೀಡುತ್ತದೆ. ಇನ್ನೂ ಎಲ್ಲಾ ವಿಧದ ಉಳಿತಾಯ ಹಾಗೂ ಹೂಡಿಕೆಗಳಲ್ಲಿ ಹಣ ತೊಡಗಿಸಿದರೆ ಒಳ್ಳೆಯದು. ಇದರಿಂದ ಹಣದುಬ್ಬರವನ್ನು ನಿಯಂತ್ರಿಸಿಕೊಳ್ಳಬಹುದು.

-ಜೆ.ಸಿ.ಜಾಧವ, ಬಾಗಲಕೋಟಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ