ಕೆಲವೊಮ್ಮೆ ಆಲೂಗಡ್ಡೆ (ಬಟಾಟೆ) ಗಳನ್ನು ಮನೆಗೆ ತಂದು ಹಾಗೇ ಇಟ್ಟರೆ ಅವುಗಳಿಗೆ ಮೊಳಕೆ ಬರುವುದು ಮಾಮೂಲು. ಇದಕ್ಕೆ ಕಾರಣ ವಾತಾವರಣದ ತೇವಾಂಶ. ಈ ತೇವಾಂಶವನ್ನು ಹೀರಿಕೊಂಡ ಆಲೂಗಡ್ಡೆಗಳು ಮೊಳಗೆ ಬಿಡಲು ಪ್ರಾರಂಭವಾಗುತ್ತದೆ. ಇನ್ನು ಕೆಲವು ಸಮಯಗಳಲ್ಲಿ ಅಂಗಡಿಯಲ್ಲಿಯೇ ಮೊಳಕೆ ಬಂದಿರುವ ಅಲೂಗಡ್ಡೆಗಳೂ ಇರುತ್ತವೆ. ಹಾಗಿದ್ದರೆ ಇವುಗಳು ಒಳ್ಳೆಯದೇ? ಆಹಾರಕ್ಕೆ ಬಳಸಬಹುದೇ? ಎನ್ನುವ ಪ್ರಶ್ನೆಗಳು ಹಲವರಲ್ಲಿ ಮೂಡಬಹುದು. ತಜ್ಞರು ಹೇಳುವ ಪ್ರಕಾರ, ಇದು ದೇಹಕ್ಕೆ ಒಳ್ಳೆಯದಲ್ಲ. ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳದಿದ್ದರೂ, ಇದು ಕೆಲವೊಂದು ಸಮಸ್ಯೆಗಳನ್ನಂತೂ ಸೃಷ್ಟಿಸುತ್ತದೆ. ಆಲೂಗಡ್ಡೆ ಮೊಳಕೆಗಳು ಸ್ವಲ್ಪಮಟ್ಟಿಗೆ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದನ್ನು Glycoalkaloids ಎಂದು ಅಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಇವುಗಳ ಸೇವನೆಯಿಂದ ಆಸಿಡಿಯಂಥ ಸಮಸ್ಯೆಗಳು ಹೆಚ್ಚಾಗುತ್ತವೆ. ಮೊದಲೇ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಅದು ಇನ್ನಷ್ಟು ಉಲ್ಬಣವಾಗುತ್ತದೆ. ಅದರಲ್ಲಿಯೂ ಗರ್ಭಿಣಿಯರು ಇದನ್ನು ತಿನ್ನದೇ ಇರುವುದೇ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ ಒಂದು ವೇಳೆ ಈ ಮೊಳಕೆ ಚಿಕ್ಕದಾಗಿದ್ದರೆ, ಅವುಗಳನ್ನು ತೆಗೆದುಹಾಕಿ ಆಲೂಗಡ್ಡೆ ತಿನ್ನಬಹುದು, ಅದರಿಂದ ಹೆಚ್ಚಿಗೆ ಸಮಸ್ಯೆ ಆಗಲಾರದು ಆದರೆ, ಮೊಳಕೆ ತುಂಬಾ ದೊಡ್ಡದಾಗಿದ್ದರೆ, ಅವುಗಳನ್ನು ಸೇವನೆ ಮಾಡದಿರುವುದೇ ಒಳ್ಳೆಯದು ಏಕೆಂದರೆ ಮೊದಲೇ ಹೇಳಿದಂತೆ glycoalkaloids ಎನ್ನುವ ವಿಷಕಾರದ ಅಂಶ ದೇಹವನ್ನು ಸೇರುತ್ತದೆ. ಇದು ಆಸಿಡಿಟಿ ಮಾತ್ರವಲ್ಲದೇ, ಹೊಟ್ಟೆ ನೋವು, ವಾಕರಿಕೆ ಮತ್ತು ಇತರ ತೊಂದರೆಗಳನ್ನೂ ಉಂಟುಮಾಡಬಹುದು ಎನ್ನಲಾಗಿದೆ. ಇನ್ನು ಗರ್ಭಿಣಿಯರು ಈ ರೀತಿ ದೊಡ್ಡದಾಗಿ ಮೊಳಕೆ ಇರುವ ಅಲೂಗಡ್ಡೆ ಹಾಗೆಯೇ ತಿಂದರೆ ತುಂಬಾ ಅಪಾಯ ಎಂದೂ ಹೇಳಲಾಗುತ್ತದೆ. ಇದರಿಂದ ಜನನ ದೋಷಗಳು ಆಗಬಹುದು ಎನ್ನಲಾಗಿದೆ. ಅದರಲ್ಲಿಯೂ ಹಸಿರು ಬಣ್ಣದ ಆಲೂಗಡ್ಡೆ ಇದ್ದು, ಅದಕ್ಕೆ ಮೊಳಕೆ ಬಂದರಂತೂ ತಿನ್ನದೇ ಇರುವುದೇ ಒಳಿತು ಹಾಗೊಂದು ವೇಳೆ ತಿನ್ನಲೇಬೇಕು. ಎಂದಾದರೆ ವಿಷದ ಪ್ರಮಾಣವನ್ನು ಕಡಿಮೆ ಮಾಡಲು, ಮೊಗ್ಗುಗಳಿರುವ ಭಾಗದ ಸಿಪ್ಪೆ ಮತ್ತು ಮೊಗ್ಗುಗಳನ್ನು ತೆಗೆದು ಹಾಕಿ ಆಹಾರದಲ್ಲಿ ಬಳಸಿಕೊಳ್ಳಬಹುದು. ಎಲ್ಲಕ್ಕಿಂತ ಉತ್ತಮ ವಿಧಾನ ಎಂದರೆ ಮಾರುಕಟ್ಟೆಯಿಂದ ತರುವಾಗಲೇ ಮೊಳಕೆಗಳಿಲ್ಲದ ಆಲೂಗಡ್ಡೆಯನ್ನು ಆಯ್ಕೆ ಮಾಡಿ ತರುವುದು ಮತ್ತು ಆದಷ್ಟು ಬೇಗ ಅವುಗಳನ್ನು ಆಹಾರದಲ್ಲಿ ಬಳಸಿಕೊಳ್ಳುವುದು. ನೆನಪಿಡಿ, ಆಲೂಗಡ್ಡೆ ಉತ್ತಮ ಪೌಷ್ಟಿಕ ಆಹಾರ, ಆದರೆ ಮೊಳಕೆ ರಹಿತವಾಗಿ ಬಳಸಿದರೆ ಮಾತ್ರ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!