ಸದಾ ಗ್ರಾಹಕರಿಂದ ತುಂಬಿ ಗಿಜಿಗುಡುತ್ತಿರುತ್ತದೆ ಆ ಕಾಫಿ ಶಾಪ್. ಅಂಗಡಿಯ ಮಾಲೀಕರು ಇಡೀ ದಿನ ಕಾರ್ಯನಿರತರಾಗಿರುತ್ತಿದ್ದರು. ಶನಿವಾರವಾದ್ದರಿಂದ ಅವರ ಅಂಗಡಿ ಇನ್ನಷ್ಟು ಜನದಟ್ಟಣೆಯಿಂದ ಕೂಡಿತ್ತು.
ಅಂದು ಬೆಳಗ್ಗಿನಿಂದಲೇ ಶುರುವಾಗಿದ್ದ ಅವರ ತಲೆನೋವು. ಸಂಜೆಯ ಹೊತ್ತಿಗೆ ವಿಪರೀತವೆನಿಸತೊಡಗಿತು ಇನ್ನು ಸಹಿಸಲಾಗದೆ, ಅವರು ಕೌಂಟರ್ ನೋಡಿಕೊಳ್ಳಲು ಸಿಬ್ಬಂದಿಯನ್ನು ಬಿಟ್ಟು ಅಂಗಡಿಯಿಂದ ಹೊರಬಂದರು.
ತಲೆನೋವಿಗಾಗಿ ಮಾತ್ರೆ ಖರೀದಿಸಲು ಔಷಧದ ಅಂಗಡಿಗೆ ಹೊರಟರು. ಮಾತ್ರೆ ನುಂಗಿದ ಸ್ವಲ್ಪ ಹೊತ್ತಿಗೆ ಸಮಾಧಾನವಾಯಿತು. ಕೆಲವೇ ನಿಮಿಷಗಳಲ್ಲಿ ಅವರಿಗೆ relief ಎನಿಸತೊಡಗಿತು.
ಅವರು ಅಲ್ಲಿಂದ ಹೊರ ಬರುತ್ತಾ ಅಲ್ಲಿದ್ದ ಸೇಲ್ಸ್‌ಗರ್ಲ್‌ಗೆ ಕೇಳಿದರು, ನಿಮ್ಮ owner ಎಲ್ಲಿ? ಅವರು ಇಂದು ಕ್ಯಾಶ್ ಕೌಂಟರ್‌ನಲ್ಲಿ ಕಾಣಿಸ್ತಾ ಇಲ್ಲ.
ಆಕೆ ಉತ್ತರಿಸಿದಳು, -- ಸರ್, ಅವರಿಗೆ ತಲೆನೋವು ಎಂದು ಕಾಫಿ ಕುಡಿಯಲು ನಿಮ್ಮ ಕಾಫಿ ಶಾಪ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿ ಹೋದರು . ಒಂದು ಕಪ್ ಬಿಸಿ ಕಾಫಿ ಕುಡಿದರೆ ತಲೆನೋವಿನಿಂದ ಮುಕ್ತಿ ಸಿಗುತ್ತದೆ ಎನ್ನುತ್ತಿದ್ದರು.
ಓಹ್! ಸರಿ ಎಂದು ಇವನು ಅಲ್ಲಿಂದ ಹೊರಟನು.
ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಮ್ಮಲ್ಲಿರುವ ಅನೇಕ ಸಮಸ್ಯೆಗಳಿಗೆ ನಮ್ಮಲ್ಲಿಯೇ ಪರಿಹಾರ ಸಮಾಧಾನಗಳನ್ನು ಇಟ್ಟುಕೊಂಡು ಇನ್ನೊಬರತ್ತ ದೃಷ್ಟಿ ಹಾಯಿಸುವ ವಿಶಿಷ್ಟ ಪ್ರಕರಣ ಇದು. ಎಷ್ಟು ವಿಚಿತ್ರ, ಆದರೆ ನಿಜ.
ಔಷಧದ ಅಂಗಡಿಯವ ಕಾಫಿ ಕುಡಿಯುವ ಮೂಲಕ ತಲೆನೋವನ್ನು ನಿವಾರಿಸಿ ಕೊಳ್ಳುತ್ತಾನೆ ಮತ್ತು ಕಾಫಿ ಶಾಪ್ ಮಾಲೀಕ ಮಾತ್ರೆ ಸೇವಿಸುವ ಮೂಲಕ ತಲೆನೋವು ನಿವಾರಿಸಿ ಕೊಳ್ಳುತ್ತಾನೆ. ಅದೇ ರೀತಿ, ನಮ್ಮಲ್ಲಿ ಅನೇಕರು ತಮ್ಮ ಅನೇಕ ಸಮಸ್ಯೆಗಳಿಗೆ ತಮ್ಮಲ್ಲೇ ಇರುವ ಸುಲಭವಾಗಿ ಸಿಗಬಹುದಾದ ಪರಿಹಾರಗಳನ್ನು ಮರೆತು ಬೇರೊಂದು ಕಡೆ ಹುಡುಕಲು ಪರಿತಪಿಸುತ್ತಾರೆ. ಶಾಂತಿಯು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಯಾವಾಗಲೂ ನಮ್ಮೊಂದಿಗೆ ಇರುತ್ತದೆ ಎಂದು ನಾವು ಅರಿತುಕೊಳ್ಳದೇ ಹೋಗುವುದು ಎಂತಹ ವಿಪರ್ಯಾಸವಲ್ಲವೇ?
~ಸಂಪಿಗೆ ವಾಸು, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!