ಇಸವಿ 2019ರಲ್ಲಿ ಒಂದು ವೃದ್ಧಾಶ್ರಮದ ಬಗ್ಗೆ ಬರೆದು ಹಂಚಿಕೊಂಡಿದ್ದೆ, ನಾನು ಅಂದು ಬರೆದ ಬರಹ ಇಂದಿಗೂ Circulate ಆಗುತ್ತಿದೆ ಮತ್ತು ನನಗೆ ಕರೆಗಳು ಬರುತ್ತಿವೆ. ಇತ್ತೀಚಿಗೆ ನನ್ನ ಹತ್ತಿರದ ಸಂಬಂಧಿಯೊಬ್ಬರಿಗೆ ವೃದ್ಧಾಶ್ರಮ ಅಂದರೆ With Medical Care (Nursing Care) ಬೇಕಾಗಿತ್ತು, ನಾನು ಮೊದಲು ಹೇಳಿದ ವೃದ್ಧಾಶ್ರಮದಲ್ಲಿ Nursing Care ಇಲ್ಲ, ಆದ್ದರಿಂದ Nursing Care ಇರುವ ವೃದ್ಧಾಶ್ರಮದ ಹುಡುಕಾಟ ಪ್ರಾರಂಭಮಾಡಿದೆ, ನಾಲ್ಕು ಐದು ದಿನಗಳ ಹುಡುಕಾಟದಲ್ಲಿ ನನಗೆ 14-15 ವೃದ್ಧಾಶ್ರಮಗಳು With Nursing Care ವ್ಯವಸ್ಥೆ ಇರುವವು ಸಿಕ್ಕವು. ಅಲ್ಲಿ ಹೋಗಿ ನೋಡಿದರೆ ಒಂದಕ್ಕಿಂತ ಒಂದರ ವ್ಯವಸ್ಥೆ ಭಯಾನಕ, 14-15 ರಲ್ಲಿ 4 ವೃದ್ಧಾಶ್ರಮಗಳು ಚೆನ್ನಾಗಿದ್ದವು ಸಿಕ್ಕಿದವು. ಸಿಕ್ಕ ಎಲ್ಲ ವೃದ್ಧಾಶ್ರಮಗಳ ತಿಂಗಳ ಖರ್ಚು ಕನಿಷ್ಠ 25,000 ಇದೆ, ಇದರಲ್ಲಿ ಮಲಗಲು ಜಾಗ, 10-15 ಜನರನ್ನು ನೋಡಿಕೊಳ್ಳಲು ಒಬ್ಬನು ಯಾ ಒಬ್ಬಳು ನುರಿತ ಕೆಲಸಮಾಡುವವರು, ಮಧ್ಯಾಹ್ನ ಯಾವುದಾದರೂ ಒಂದು Rice Item, ಬೆಳಗ್ಗೆ ಮೆದು ಇಡ್ಲಿ ಯಾ ದಿನಕ್ಕೊಂದು ಬಗೆ ತಿಂಡಿ, ಕಾಫಿ ಚಹಾ ದಿನಕ್ಕೊಂದು ಯಾ ಎರಡು ಬಾರಿ, ಸ್ನಾನ ಮಾಡಿಸಲು ದಡೂತಿ ಅವಳು ಯಾ ಅವನು.

ಜೀವನ ಪೂರ್ತಿ ತನಗೆ ಬೇಕಂತೆ ಬದುಕಿದ ಮನುಷ್ಯ, ಈಗ ನಾಲ್ಕು ಗೋಡೆಯ ಮಧ್ಯೆ ಮಲಗಿರಬೇಕು, ಎದ್ದು ಹೊರಬರಲು ಇನ್ನೊಬ್ಬರ ಸಹಾಯ ಮತ್ತು Wheelchair, ಕೆಲವರಿಗೆ ಅದೂ ಇಲ್ಲ ಮಲಗ್ಗಿದ್ದಲ್ಲೆ ಎಲ್ಲ, ಎಷ್ಟು ಹೊತ್ತಿಗೆ ಮಲ ಮೂತ್ರ ವಿಸರ್ಜನೆ ಆಯಿತೋ ಯಾರು ಎಷ್ಟು ಹೊತ್ತಿಗೆ ಬಂದು ಅದನ್ನು ತೆಗೆದು ಸ್ಚಚ್ಚಗೊಳಿಸುತ್ತಾರೋ ಗೊತ್ತಿಲ್ಲ. ಬೆಳಗ್ಗೆ ಮಧ್ಯಾಹ್ನ ರಾತ್ರೆ ಊಟ ತಿಂ‌ಡಿ ಮಾಡಿಸುವವನು/ಳು ಬರುತ್ತಾಳೆ, ಆ ಆಅ ಅನ್ನು ಅಂತ ಹೇಳುತ್ತಾಳೆ ಗದರಿಸುತ್ತಾಳೆ, ಕೊಟ್ಟ ಆಹಾರಕ್ಕೆ ಉಪ್ಪಿದಿಯೋ ಖಾರ ಇದೆಯೋ ಯಾವುದೂ ಹೇಳಲಾಗಲ್ಲ ಹೇಳಿದರೆ ಕೇಳುವವರಿಲ್ಲ. 

ಒಂದು ಕೊಠಡಿಯಲ್ಲಿ ನಾಲ್ಕು ಜನ, ಕೆಲವು ಕಡೆ ಇಬ್ಬರೂ ಇನ್ನು ಕೆಲವರು ನನಗೊಬ್ಬನಿಗೆ/ಳಿಗೆ ಬೇಕು ಎಂದು ಪಡೆದಿದ್ದಾರೆ, ಏಳಲು ಆಗಲ್ಲ ಕೂರಲೂ ಆಗಲ್ಲ, ಕಿಟಕಿಯ ಬಾಗಿಲು ತೆರೆಯಲು ಇನ್ನೊಬ್ಬರು ಬೇಕು. ಪಕ್ಕದ ಹಾಸಿಗೆಯಲ್ಲಿ ಇನ್ನೊಬ್ಬರು ಅವರ ಪಕ್ಕದಲ್ಲಿ ಇನ್ನೊಬ್ಬರು, ಈ ಮೊದಲು ಇವಾರದ್ದೂ ಪರಿಚಯವಿರಲಿಲ್ಲ, ಈಗ ಪರಿಚಯವಾದರೂ ಪ್ರಯೋಜನವಿಲ್ಲ. ಮಕ್ಕಳು ಸೇರಿಸಿ ಹೋಗಿದ್ದಾರೆ, ಆಶ್ರಮದವರು ತಿಂಗಳಿಗೆ ಬಿಲ್ ಕಳಿಸುತ್ತಾರೆ, SMS ಕಳಿಸುತ್ತಾರೆ, ಅವರು ಹೇಳಿದ Bill ಕೊಟ್ಟಾಗ ಮಗನಾದ/ಮಗಳಾದ ಕರ್ತವ್ಯ ಮುಗಿತು. ಇಲ್ಲಿ ಮಕ್ಕಳಿದ್ದು ತಪ್ಪ ಖಂಡಿತ ಅಲ್ಲ, ಕಾರಣ ನಮ್ಮಗಳಿದ್ದೇಲ್ಲ ವಲಸೆ ಬದುಕು, ಇಂದು ಇಲ್ಲಿ ನಾಳೆ ಇನ್ನೊಂದು ಕಡೆ. ದೂರುವುದು ಯಾರನ್ನು? ಮಗ ಒಬ್ಬ ಮಗಳು ಒಬ್ಬಳು, ಮಗಳಿಗೆ ಆದ್ದೂರಿಯಾಗಿ ಸಾಲ ಸೋಲ ಮಾಡಿ ಮದುವೆ ಮಾಡಿದ್ದಾಗಿದೆ, ಮಗನಿಗೆ ಮದುವೆಯಾಗಿ ಸೊಸೆ ಬಂದಿದ್ದಾಳೆ, ಅವಳಿಗೆ ಮಕ್ಕಳು ಅವಳ ಬದುಕು, ಅವಳನ್ನು ದೂರಲಾಗುತ್ತಾ? ಖಂಡಿತ ಇಲ್ಲ.

ವೃದ್ಧಾಶ್ರಮಗಳನ್ನು ಹುಡುಕುತ್ತಾ ಅನೇಕ ಆಲೋಚನೆಗಳು, ಬದುಕು ಇಷ್ಟೇ ಅಲ್ವಾ? ಅಲ್ಲೊಂದು ವೃದ್ಧಾಶ್ರಮಕ್ಕೆ ಒಳಗೆ ಹೋದೆ, ಅವರು ಅಲ್ಲಿರುವ ವ್ಯವಸ್ಥೆ ತೋರಿಸಿದ್ರು, ಸರ್ ಬುಕ್ ಮಾಡಿ ಯಾವುದಾದರೂ ಖಾಲಿ ಆದಾಗ ಹೇಳುತ್ತೇವೆ ಅಂದ್ರು. ಅಯ್ಯೋ ಖಾಲಿ ಆದಾಗ ಅಂದರೆ ಇದೇನು Lodging ಸರ್ ಅಂತ ಕೇಳಿದೆ, ಸುಮ್ಮನೆ ನಕ್ಕರು, ಸರ್ ಇದೂ ಒಂದು ತರಹ Lodging, ಇಲ್ಲಿ ಕೆಲವರು ಅಂದರೆ ಬೆರಳೆಣಿಕೆಯ ಕೆಲವರು ಇಲ್ಲಿ ಸರಿ ಇಲ್ಲ ಇನ್ನೊಂದು ಕಡೆ ಹೋಗಬೇಕು ಎಂದು ಪಟ್ಟು ಹಿಡಿದು ಮಕ್ಕಳೊಂದಿಗೆ ಮುನಿಸಿಕೊಂಡು ಇನ್ನೊಂದು ಕಡೆಗೆ ಹೋಗುತ್ತಾರೆ, ಅಲ್ಲಿಯೂ ತಿಂಗಳಲ್ಲಿ ಬೋರ್ ಆಗುತ್ತೆ, ಇಲ್ಲಿಗಿಂತ ಅಲ್ಲಿ ಚೆನ್ನಾಗಿತ್ತು ಅಂತಾರೆ ಬರುತ್ತಾರೆ. ಇನ್ನೊಂದು ರೀತಿಯಲ್ಲಿ ಇದೂ Lodging ಅಲ್ವ? ದೇವರು ಕಳಿಸಿರುತ್ತಾನೆ, ಇಲ್ಲಿ ಮನಸ್ಸಿಗೆ ಬಂದಹಾಗೆ ಬದುಕುತ್ತೇವೆ ಕೊನೆಗೆ ಇಲ್ಲಿಂದ ಬಾರದ ಲೋಕಕ್ಕೆ ಹೋಗುತ್ತಾರೆ. ನಾವು ಅವರಿದ್ದ ಜಾಗವನ್ನು ಸ್ವಚ್ಚ ಮಾಡುತ್ತೇವೆ ಇನ್ನೊಬ್ಬರಿಗೆ ಕೊಡುತ್ತೇವೆ. ಮುಂದೆ ಸಾಗುತ್ತಿದ್ದೆ, ಅರೆ ಇವರು ಗೊತ್ತಲ್ವ ಎಂದು ಅಲ್ಲಿ ಮಲಗಿದ್ದವರನ್ನು ನೋಡಿದೆ, ಅವರೆ ಇವರಿರಬಹುದಾ? ಸಂದೇಹವೇನಕ್ಕೆ ಎಂದು ಮೇಲ್ವಿಚಾರಕರನ್ನು ಕೇಳಿದೆ, ಹೌದು ಸರ್ ನೀವು ಹೇಳಿದಿರಲ್ಲ ಅವರೆ ಇವರು, ಎರಡು ವರ್ಷದಿಂದ ಹೀಗೆಯೇ ಇದ್ದಾರೆ, ಮೂರು ಆರು ತಿಂಗಳಿಗೊಮ್ಮೆ ಮಕ್ಕಳು ಬರುತ್ತಾರೆ, ಹತ್ತು ಇಪ್ಪತ್ತು ನಿಮಿಷ ಇರುತ್ತಾರೆ ಹೋಗುತ್ತಾರೆ. ನನ್ನ ಪರಿಚಯದವರಾಗಿದ್ದರು ಉನ್ನತ ಅಧಿಕಾರದಲ್ಲಿದ್ದರು, ಒಂದು ಬಾರಿ ಅವರನ್ನು ಭೇಟಿಯಾಗಲು ಹರಸಾಹಸ ಪಟ್ಟಿದ್ದೆ, ಯಾವುದೋ ಕೆಲಸವಾಗಬೇಕಿತ್ತು, ಭೇಟಿಯಾದಾಗ ಅವರ ಮುಂದೆ ನಿಲ್ಲಲು ಸ್ವಲ್ಪ ಮುಜುಗರವಾಗಿತ್ತು, ದೊಡ್ಡ ಅಧಿಕಾರಿ, ಸರಿ ಅವರ Assistant ಮುಖಾಂತರ ಅವರಿಗೆ ಕೊಡಬೇಕಾದ್ದನ್ನು ತಲುಪಿಸಿದ್ದೆ, ನನ್ನ ಕೆಲಸವಾಗಿತ್ತು. ಇಂದು Assistant ಇಲ್ಲ, ಮಕ್ಕಳಿಲ್ಲ, ಬೆಲ್ ಮಾಡಿದರೆ ಗುಮಾಸ್ತ ಬರುವವನಿಲ್ಲ, ಮೂತ್ರಮಾಡಲು ಸಣ್ಣದೊಂದು Pipe ಹಾಕಿದ್ದಾರೆ. ನೋಡಿದ್ದಾಗ ಅಂದಿನ ಅವರನ್ನು ಇಂದಿನ ಇವರನ್ನು ಬೇಸರವಾಯಿತು, ಬದುಕು ಅಷ್ಟೆ ಅಲ್ವ.

ನನಗೆ ವೃದ್ಧಾಶ್ರಮವನ್ನು ಹುಡುಕಿ ಸಾಕಾಗಿತ್ತು, ಆದರೆ ಮಾಹಿತಿ ಸಿಕ್ಕಿತಲ್ಲ ಎಂದು ಸುಮ್ಮನಾದೆ, ಒಂದು ವಾರದ ಹುಡುಕಾಟ, ಎಲ್ಲೂ ಜಾಗ ಇಲ್ಲ, ಜಾಗವಿದ್ದಲ್ಲಿ ನೈರ್ಮಲ್ಯದ ಕೊರತೆ, ಕೆಲಸದವರಿಲ್ಲ, ದೊಡ್ಡ ಹಾಲ್ ನಲ್ಲಿ 15-18 ಮಂಚಗಳು, ಹೆಚ್ಚಿನವರು ಮಲಗಿದ್ದಾರೆ, ಅವರೆಲ್ಲ ಎದ್ದು ಓಡಾಡುವುದು ಅನುಮಾನ. ಮನಸ್ಸು ಭಾರವಾಗಿತ್ತು, ಬೇಸರವಾಗಿತ್ತು. ಮುಂದೆ ಸಾಗುತ್ತಾ ಬಂದೆ, ದೊಡ್ಡದಾದ ಒಂದು ಚೌಟ್ರಿ ಕಲ್ಯಾಣಮ೦ಟಪ, ಹತ್ತಾರು ಕಾರುಗಳು, ಲೈಟುಗಳು, ಕೆ೦ಪು ಹಾಸು, ಬದಿಯಲ್ಲಿ ಹೂವಿನ ಅಲಂಕಾರ, ಎಲ್ಲರೂ ಹೊಸ ಹೊಸ ಉಡುಪಿನಲ್ಲಿ, ದೂರದಿಂದಲೆ ನಿಂತು ಗಮನಿಸಿದೆ, ಅಲ್ಲಿ ನೋಡಿಬಂದ ವೃದ್ಧಾಶ್ರಮ ಮಲಗಿದ್ದವರು ನೆನಪಾದರೆ ಇಲ್ಲಿ ಮದುವೆಯ ದಿಬ್ಬಣ. ಎಲ್ಲವೂ ವಿಚಿತ್ರ ಅನಿಸಿತು. 

ಹುಟ್ಟೊಂದು ಸಾಲ, ಹುಟ್ಟಿದ ನಂತರ ಜೀವನಕ್ಕಾಗಿ ಸಾಲ, ಕೊನೆಯಲ್ಲು ಸಾವಿಗಾಗಿ ಸಾಲ. ಇಲ್ಲಿ ಸಾಲ ಅಂದರೆ ಆರ್ಥಿಕ ಸಾಲ ಮಾತ್ರವಲ್ಲ, ಬದುಕೂ ಒಂದು ವಿಚಿತ್ರವಾದ ಸಾಲ.

-“ಕಿಶ್ಪಾ” ಗಣೇಶ್

ಚಿತ್ರ ಕೃಪೆ: ಇಂಟರ್ನೆಟ್ ತಾಣ