ನಾನು ಸಣ್ಣವನಿದ್ದಾಗ ನನ್ನ ಅಜ್ಜಿ ಮನೆಯ ಹಿಂದುಗಡೆಯೇ ಹುಣಸೆ ಹುಳಿ ಅಥವಾ ಹಣ್ಣು ಮರ ಇತ್ತು. ಆಗ ಹುಣಸೆ ಹುಳಿ ಮಾತ್ರ ಇತ್ತು. ಅದು ಎಷ್ಟೇ ಹಣ್ಣಾದರೂ ಅದರ ರುಚಿ ಹುಳಿಯೇ ಆಗಿತ್ತು. ಆದರೆ ಈಗ ಹಾಗಲ್ಲ. ಸಿಹಿ ಹುಣಸೆ ಹಣ್ಣು ಮಾರುಕಟ್ಟೆಗೆ ಬರುತ್ತಿದೆ. ಹುಳಿಯ ಗುಣವೇ ಇಲ್ಲ. ಹುಣಸೆ ಹಣ್ಣಿಗೆ ಅಪವಾದ ಈ ಸಿಹಿ ಹುಣಸೆ ಎನ್ನಬಹುದೇನೋ? ಹುಣಸೆ ಕಾಯಿ ಇರುವಾಗ ಇಡೀ ಹುಣಸೆಯನ್ನು ತಿನ್ನುತ್ತಿದ್ದೆವು, ಅದು ಸ್ವಲ್ಪ ಬೆಳೆಯುವಾಗ ಸಿಪ್ಪೆ ತೆಗೆದು ತಿನ್ನುವುದು, ಕಾಯಿ ಹಣ್ಣಾಗಿ ಕೆಳಗೆ ಬೀಳುವ ಹುಣಸೆ ಹಣ್ಣನ್ನು ಚಪ್ಪರಿಸಿ ತಿನ್ನುತ್ತಿದ್ದೆವು. ಆದರೆ ಈಗಿನ ಮಕ್ಕಳು ಹುಣಸೆ ಹಣ್ಣನ್ನು ತಿಂದೇ ಇರಲಿಕ್ಕಿಲ್ಲ. ಹುಣಸೆ ಹಣ್ಣು ಬಹಳಷ್ಟು ರೋಗ ನಿರೋಧಕ ಹಾಗೂ ಆರೋಗ್ಯಕರ ಗುಣಗಳನ್ನು ಹೊಂದಿದೆ.
ಹುಣಸೆ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಯಕೃತ್ತು ಮತ್ತು ಹೃದಯ ಕಾಯಿಲೆಗಳಿಂದ ಸುರಕ್ಷಿತವಾಗಿರಿಸುತ್ತದೆ. ಫೈಬರ್ನಿಂದ ಸಮೃದ್ಧವಾಗಿರುವ ಹುಣಸೆ ಹಣ್ಣು, ಕೊಬ್ಬನ್ನು ಹೊಂದಿರುವುದಿಲ್ಲ. ಆದ್ದರಿಂದ, ತಜ್ಞರ ಪ್ರಕಾರ, ಪ್ರತಿದಿನ ಹುಣಸೆಹಣ್ಣು ತಿನ್ನುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಪ್ಲೇವನಾಯ್ಡ್ ಗಳು ಮತ್ತು ಪಾಲಿಫಿನಾಲ್ಗಳನ್ನು ಹೊಂದಿರುತ್ತದೆ.
ಹುಣಸೆಹಣ್ಣು ಪಾಲಿಫಿನಾಲ್ಗಳು ಮತ್ತು ಪ್ಲೇವನಾಯ್ಡ್ ಗಳಿಂದ ಸಮೃದ್ಧವಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ತುಂಬಾ ಪ್ರಯೋಜನಕಾರಿಯಾಗಿದೆ. ಹುಣಸೆ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಡಯಾಸ್ಟೋಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಹುಣಸೆಹಣ್ಣು ಉತ್ಕರ್ಷಣ ನಿರೋಧಕಗಳು, ಪ್ಲೇವನಾಯ್ಡ್ಗಳು ಮತ್ತು ವಿಟಮಿನ್ ಸಿ ಮತ್ತು ಎ ನಂತಹ ಖನಿಜಗಳ ಶಕ್ತಿ ಕೇಂದ್ರವಾಗಿದೆ. ಆದ್ದರಿಂದ ಇದು ನಿಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳ ರಚನೆಯನ್ನು ತಡೆಯುತ್ತದೆ. ಹುಣಸೆಹಣ್ಣು ಚರ್ಮವನ್ನು ತುಂಬಾ ಉತ್ತಮಗೊಳಿಸುತ್ತದೆ. ಹುಣಸೆ ಫೇಸ್ ಪ್ಯಾಕ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಚರ್ಮದ ಟೋನ್ ಅನ್ನು ಹಗುರಗೊಳಿಸಲು ಮತ್ತು ಕಪ್ಪು ಕಲೆಗಳು ಮತ್ತು ವರ್ಣದ್ರವ್ಯವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಇದು ಉತ್ತಮ ಘಟಕಾಂಶವಾಗಿದೆ. ಆದರೆ ವಿಭಿನ್ನ ವಸ್ತುಗಳು ಪ್ರತಿಯೊಬ್ಬ ಮನುಷ್ಯನ ಚರ್ಮಕ್ಕೆ ಸರಿಹೊಂದುವುದಿಲ್ಲ. ಆದ್ದರಿಂದ ನೀವು ಅದನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ನಿಮ್ಮ ಕೂದಲು ನಿರಂತರವಾಗಿ ಉದುರುತ್ತಿದ್ದರೆ, ಬಿಳಿಯಾಗಿದ್ದರೆ ಹುಣಸೆಹಣ್ಣು ಅದಕ್ಕೆ ಮದ್ದಾಗಬಹುದು. ಹುಣಸೆಹಣ್ಣು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಉತ್ತಮ ಮನೆಮದ್ದು. ಹುಣಸೆಹಣ್ಣಿನ ನಿಯಮಿತ ಸೇವನೆಯು ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ನಿಲ್ಲಿಸುತ್ತದೆ. ಯಕೃತ್ತಿನ ಸಮಸ್ಯೆಗಳಿದ್ದರೆ, ನೀವು ಹುಣಸೆಹಣ್ಣು ಸೇವಿಸಬೇಕು ಏಕೆಂದರೆ ಇದು ನಿಮ್ಮ ಯಕೃತ್ತನ್ನು ಆರೋಗ್ಯಕರವಾಗಿಸಲು ಪೋಷಕಾಂಶಗಳನ್ನು ಹೊಂದಿರುತ್ತದೆ. ಕೊಬ್ಬಿನ ಯಕೃತ್ತಿನ ಕಾಯಿಲೆ ಅಥವಾ ಹೆಪಟೊಸ್ಪಿಯಾಟೋಸಿಸ್ ಅನ್ನು ತಪ್ಪಿಸಲು ಇದು ತುಂಬಾ ಒಳ್ಳೆಯದು. ತಜ್ಞರ ಪ್ರಕಾರ, ಹುಣಸೆ ಹಣ್ಣಿನ ಸಾರವು ನಿಮ್ಮ ಯಕೃತ್ತನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಏಕೆಂದರೆ ಇದು ಪ್ರೊಸೈನಿಡಿನ್ಗಳು ಎಂಬ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ಸ್ವತಂತ್ರ ರಾಡಿಕಲ್ಗಳಿಂದ ಯಕೃತ್ತಿಗೆ ಉಂಟಾಗುವ ಹಾನಿಯನ್ನು ಹೋರಾಡುತ್ತದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!