ಕೊಡವಿಕೊಂಡು

ಮೇಲೆದ್ದರೂ

ಬೀಳುವದಿಲ್ಲ ಕೆಳಗೆ...

ತಲೆಯ ತುಂಬ

ತುಂಬಿರುವ

ಹತ್ತು-ಹಲವು ವಿಚಾರ

ತಾಪತ್ರಯಗಳು


ಮೈದಡಿವಿಕೊಂಡರೇ

ಕೈಗೆಟುಕುವ

ನೋವಿನಾ ಕುರುಹು...

ದೇಹ ಎನ್ನದಾದರೂ

ರಕುತ ಬರುವವರೆಗೆ

ಕೆರೆದುಕೊಳ್ಳುವಾ ತುರಿಕೆಗಳು

ಅದು ಹೀಗಲ್ಲಾ

ಇದು ಹಾಗಿದ್ರೆ ಒಳ್ಳೆಯದಿತ್ತು

ಪರಿತಪಿಸುವಾ ರಾಗಗಳು...

ದಹಿಸಿಕೊಂಡರೂ

ಬೂದಿಯಾಗದೇ

ಉರಿಯುತಿರುವ ನೋವುಗಳು


ದೂರ ದಿಕ್ಕಿನಲಿ

ಸೂರ್ಯ ರಶ್ಮಿಯ ತೋರಿ

ಸ್ನೇಹದಾಶ್ರಯ ನೀಡಿ

ಬೆಚ್ಚನೆಯ ಹನಿ ಪ್ರೀತಿ ಸೂಸಿ

ತಂಪನೆರೆಯುವಾ

ಸಾಂತ್ವನದ ಜೀವಗಳು