ಆಂಗ್ಲ ಭಾಷೆಯ ಶೀರ್ಷಿಕೆಗೆ ಕ್ಷಮೆಯಿರಲಿ...

 

T S Eliot ಬರೆದಿರುವ ಈ ಕಾವ್ಯ ಯಾವಾಗಲೂ ನನಗೆ ಒಂದು ಒಗಟಿನಂತೆ ಕಾಡುತ್ತಿತ್ತು. ಅವರ ಎಲ್ಲ ಸುಮಾರು ಕವಿತೆಗಳು ನನಗೆ ಯಾವಾಗಲು ತುಂಬಾ ಇಷ್ಟವಾದಂತಹವುಗಳು ಇದಂತೂ ತುಂಬಾ ದೊಡ್ದ ಪದ್ಯ - ಮೊದಲನೇ Stanza..ನನಗೆ ತಿಳಿದ ಮಟ್ಟಿಗೆ ಕನ್ನಡಕ್ಕೆ ಭಾಷಾಂತರ ಮಾಡಲು ಪ್ರಯತ್ನ ಪಟ್ಟೆ......ಅದರ ಫಲಿತಾಂಶ ಈ ರೀತಿ ಇದೆ..

ಚೆನ್ನಾಗಿದೆ ಅಂತ ಅನ್ನಿಸಿದರೆ ಮುಂದುವರಿಸುವ ಪ್ರಯತ್ನ ಮಾಡುವೆ...

for original version please visit

http://www.bartleby.com/198/1.html

 

ಕನ್ನಡ ಭಾವಾನುವಾದ....

 

"

ನಡೆ ಹೋಗೋಣ ಮತ್ತೆ, ನಲ್ಲೆ ನೀನು ನಾನು,
ಮರಣದಂಚಿನಲಿ ಮಲಗಿರುವ ರೋಗಿಯ ಮುಖದಂತೆ,
ಸಂಜೆಯ ಹಳದಿ ಬಾಹುಗಳು ಆಕಾಶವನ್ನಾಕ್ರಮಿಸಿರುವಾಗ
ನಡೆ ಹೋಗೋಣ, ಬರಡಾದ ಹಾದಿಯಲಿ,
ಪಿಸುಮಾತುಗಳು ರಂಜಿಸಲಿ.
ವಿಶ್ರಾಂತಿಯಿಲ್ಲದ ರಾತ್ರಿಯ..., ಕತ್ತಲ ಕೋಣೆಯಲಿ,
ತುಕ್ಕು ಹಿಡಿದ ಕಿಟಕಿಗಳಿರುವ ಉಪಹಾರ ಮಂದಿರದಲಿ,
ಬೇಸರ ತರಿಸುವ ಚರ್ಚೆಗಳಂತೆ ಕಾಣುವ ಆ ಹಾದಿಗಳಲಿ,
ನೋವು ತುಂಬಿರುವ ಉದ್ದೇಶಗಳೇ
ನಿನ್ನಲ್ಲಿ ಮೂಡುವ ಆ ಪ್ರೆಶ್ನೆ...
ಓ, ಕೇಳಬೇಡ 'ಏನೆಂದು'
ನಡೆ ಹೋಗೋಣ ಅಲ್ಲಿ, ಹೋಗಿ ನೋಡೋಣ.
ಆ ಕೋಣೆಯಲಿ, ಎಲ್ಲ ಮಹಿಳೆಯರು
ಮೈಕೆಲೊಂಜಲೊ ನ ಬಗ್ಗೆ ಮಾತನಾಡಲು ಬರುವರೊ

"

ಮುಂದುವರೆಯುವುದು....