ಬಹಳ  ದಿನಗಳಾಯ್ತು ಸಂಪದ ಓದಿ , ಬರೆದು . ಸಂಪದದ ಸೆರ್ವೆರ್ ಡೌನ್ ಆದ ಮೇಲೆ ಈ ಕಡೆ ನೋಡಿದ್ದು ಕೆಲವೇ ಬಾರಿ ಯಾಕೋ ಏನಾದರು ಬರೆಯಬೇಕು ಅನಿಸಿತು ಬರೆದಿದ್ದೇನೆ . ಇಲ್ಲಿ ಓದುವಂತಹ ಎನನ್ನು ನಾನು ಬರೆದಿಲ್ಲ ವಾದರೂ ... ಏನೋ ಒಂದು ಬರೆದ ತೃಪ್ತಿ ನನಗಿರುತ್ತೆ  .:). ಸ್ನೇಹಿತೆ ಯೊಬ್ಬಳು ಕನ್ನಡ ಕವನ ಕಳಿಸಿದಾಗ . "ನೀನು ಸಂಪದದಲ್ಲಿ ಬರಿ ಮಾರಾಯ್ತಿ" ಅಂದಾಗ ನೆನಪಾಯ್ತು.......... ಎಷ್ಟು ದಿನಗಳಾಯ್ತು ಸಂಪದ ಓದಿ , ಕನ್ನಡ ಓದಿ !!!!!!!!!!!!!!!!!!!! ಹೌದು, ಕನ್ನಡ ಓದಿ ತುಂಬ ದಿನಗಳಾಯ್ತು.... ಕನ್ನಡ ಪತ್ರಿಕೆ ಮೇಲ್ ನಲ್ಲಿ ಬರುತ್ತಿದ್ದರು .. ನೆಟ್ ನಲ್ಲಿ available ಇದ್ದರು ... ಸಮಯದ ಅಭಾವ ಕಾಡುತ್ತಿದೆ.. ವರ್ಷದಲ್ಲಿ ಎರಡೋ  ಮೂರು ಬಾರಿ ಊರಿಗೆ ಹೋದಾಗ ಮಾತ್ರ ಕನ್ನಡ ಅಕ್ಷರಗಳನ್ನು ನೋಡುವಂತಹ Situation . ಹಾಗಂತ ನಾನೇನು ಭಾರತದಿಂದ ತುಂಬ ದೂರ ಇಲ್ಲ . ಇಲ್ಲೇ ಪಕ್ಕದ ಚೆನ್ನೈ ನಲ್ಲಿದ್ದೇನೆ .. ವಿಪರ್ಯಾಸ ಎಲ್ಲ ಭಾಷೆಯ ಪತ್ರಿಕೆ ಸಿಗುವ ಈ ಊರಲ್ಲಿ ಕನ್ನಡ ಪತ್ರಿಕೆ ಇಲ್ಲ!!!!!!!!!(ನನ್ನ ಅರಿವು). ಇಲ್ಲಿನ  ಅನ್ಯ ಭಾಷಿಗರ ಗಣತಿಯಲ್ಲಿ ಎರಡೆನೇ ಸ್ಥಾನದಲ್ಲಿರುವ ಕನ್ನಡಿಗರು ವಾರ್ತೆಗಳನ್ನು ಇಂಗ್ಲಿಷ್ ನಲ್ಲಿ  ಓದಬೇಕು ......

ನಾಡಿಗರು ಅವಾಗ ಅವಾಗ ... ಮೇಲ್ ಮಾಡುತಿದ್ದಾಗ ಬಂದು ನೋಡುವುದಿತ್ತು ... ಸೇವೆರ್ ಸಮಸ್ಯೆ ಬಂದ ಮೇಲೆ ಆ ಸರ್ವಿಸ್ ಕೂಡ ಇಲ್ಲ!!!!