ದಿಲ್ಲಿಯ ಮಾಳವೀಯ ನಗರ ಪ್ರದೇಶದಲ್ಲಿರುವ ಹೋಟೆಲೊಂದರಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿ ವಿದೇಶಿಯರೂ ಸೇರಿದಂತೆ 20ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವುದು ಅತ್ಯಂತ ಮನಕಲಕುವ ದುರಂತ, ದುರಂತದಲ್ಲಿ 40ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆಯಾದರೂ ಅವರಲ್ಲಿ ಕೆಲವರು ಗಂಭೀರ ಸುಟ್ಟ ಗಾಯಗಳನ್ನು ಪಡೆದಿದ್ದಾರೆ. ಇನ್ನು ಕೆಲವರು ಬೆಂಕಿಯಿಂದ ರಕ್ಷಿಸಿಕೊಳ್ಳಲು ಹೋಟೆಲ್ ಮಹಡಿಯಿಂದ ಕೆಳಗೆ ಹಾಕಿ ಗಾಯಗೊಂಡ ಘಟನೆಯೂ ನಡೆದಿದೆ. ಇದು ದಿಲ್ಲಿಯಲ್ಲಿ ದಶಕಗಳ ಹಿಂದೆ ನಡೆದ ಉಪಹಾರ್ ಸಿನಿಮಾ ಮಂದಿರದ ಅಗ್ನಿದುರಂತವೂಸೇರಿದಂತೆ ಹಲವಾರು ಅಗ್ನಿ ದುರಂತಗಳ ಕಹಿನೆನಪುಗಳನ್ನು ಮತ್ತೊಮ್ಮೆ ಕೆದಕಿದೆ.

ಇಂತಹ ಅಗ್ನಿದುರಂತಗಳು ಆಕಸ್ಮಿಕವಾದರೂ ಬಹುತೇಕ ಬಾರಿ ಮಾನವ ಪ್ರಮಾದಗಳೇ ಇದಕ್ಕೆ ಕಾರಣವಾಗಿರುತ್ತವೆ ಎನ್ನುವುದು ಸುಳ್ಳಲ್ಲ. ಅದರಲ್ಲಿಯೂ ಅಗ್ನಿದುರಂತದಲ್ಲಿ ಸಾವುನೋವುಗಳು ಹೆಚ್ಚಾಗಲಂತೂ ಮಾನವನ ದುರಾಶೆ, ನೀತಿನಿಯಮಗಳ ಉಲ್ಲಂಘನೆ. ಆಡಳಿತದ ನಿರ್ಲಕ್ಷ್ಯ, ಮೊದಲಾದವು ಪ್ರಮುಖ ಕಾರಣಗಳಾಗಿರುತ್ತವೆ. ಪ್ರಸಕ್ತ ಮಾಳವೀಯ ನಗರದ ಹೋಟೆಲ್ ದುರಂತದಲ್ಲೂ ಇದೇ ಅಂಶಗಳು ಪ್ರಧಾನವಾಗಿ ಎದ್ದು ಕಾಣುತ್ತಿರುವುದು ದುರ್ದೈವ, ಉಪಹಾರ ಮತ್ತು ವಿರಾಮ, ಪಡೆಯಲಷ್ಟೇ ಈ ಹೋಟೆಲ್‌ಗೆ ಅನುಮತಿ ನೀಡಲಾಗಿದ್ದು, ಆರು ಕೊಠಡಿಗಳಿಗಷ್ಟೇ ಪರವಾನಿಗೆ ನೀಡಲಾಗಿತ್ತು. ಅದರೆ ಅಲ್ಲಿ 25 ಕೊಠಡಿಗಳನ್ನು ಪರವಾನಿಗೆರ ಹಿತವಾಗಿ ಕಟ್ಟಲಾಗಿತ್ತು. ಅಷ್ಟು ದೊಡ್ಡ ಕಟ್ಟಡಕ್ಕೆ ಕೇವಲ ಒಂದು ನಿರ್ಗಮನ ದ್ವಾರವಿದ್ದು, ಅಗ್ನಿಶಾಮಕ ವಾಹನಗಳು ಆಗಮಿಸಲು ಅಗತ್ಯವಾಗಿರುವ ಸೂಕ್ತ ಸ್ಥಳಾವಕಾಶವನ್ನೂ ಬಿಟ್ಟಿರಲಿಲ್ಲ. ಇವೆಲ್ಲವೂ "ಆಡಳಿತದ ಕಣ್ಣು ತಪ್ಪಿಸಿ ನಡೆದಿರಲಾರದು. ಸ್ಥಳೀಯಾಡಳಿತವು ಇವನ್ನು ಕಂಡೂ ಕಾಣದಂತೆ ಪರ್ತಿಸಿರುವ ಹಾಗೂ ಅದಕ್ಕಾಗಿ ಸೂಕ್ತ 'ಪ್ರತಿಫಲ’ ಪಡೆದಿರುವ ಸಾಧ್ಯತೆಗಳೂ ಇವೆ. ಬಹುತೇಕ ಪ್ರಕರಣಗಳಲ್ಲಿ ನಡೆಯುವುದು ಇದೇ ರೀತಿ. ಕಟ್ಟಡ ನಿರ್ಮಾಣದಲ್ಲಂತೂ ಇಂತಹ ನಿಯಮೋಲ್ಲಂಘನೆಗಳು ಸಾಕಷ್ಟು ನಡೆಯುತ್ತವೆ. ಅಗ್ನಿದುರಂತ ತಡೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ನಿಯಮವಿದ್ದರೂ ಅದನ್ನು ಕಟ್ಟಡ ನಿರ್ಮಾಣದ ವೇಳೆ ಪಾಲಿಸುವುದು ಕಡಿಮೆ.

ಇದೇ ವೇಳೆ, ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಅಗ್ನಿದುರಂತಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಕುರಿತಂತೆಯೂ ಹೆಚ್ಚಿನ ತನಿಖೆ ನಡೆಯುವ ಅಗತ್ಯವಿದೆ. ರೈಲುಗಳಲ್ಲಿ ಇತ್ತೀಚೆಗೆ ಬೆನ್ನುಬೆನ್ನಿಗೇ ನಡೆದ ಕೆಲವು ಅಗ್ನಿ ಆಕಸ್ಮಿಕಗಳಲ್ಲಿ ವಿಧ್ವಂಸಕರ ಕೈವಾಡವಿರುವುದನ್ನು ಬಳಿಕ ರೈಲ್ವೆ ಇಲಾಖೆ ಪತ್ತೆ ಹಚ್ಚಿತ್ತು. ಅದೇರೀತಿ, ಇನ್ನಿತರ ಅಗ್ನಿ ದುರಂತಗಳಲ್ಲೂ ವಿಧ್ವಂಸಕರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ. ದೇಶದ ಶಾಂತಿ, ಸುವ್ಯವಸ್ಥೆಯನ್ನು ಕೆಡಿಸಲು ದುಷ್ಟ ಶಕ್ತಿಗಳು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಈ ಆಯಾಮದಲ್ಲೂ ತನಿಖೆ ನಡೆಯುವುದು ಅವಶ್ಯವಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೪-೦೬-೨೦೨೬

ಚಿತ್ರ ಕೃಪೆ: ಹಿಂದೂಸ್ತಾನ ಟೈಮ್ಸ್ ಜಾಲತಾಣ