ಜಾತಿಗೆ ಜಾತಿ ಪಗೆ, ಹಲವರು ಬರೆದದ್ದೇ ಬರಹ

ನೀತಿ ನಿಯಮವೇ ಬೇಡ, ಕೊರೆದದ್ದೇ ಬರಹ

ಷೇರು ಸಮ ಸಾಲು, ನಿಯಮದಲಿ ಮಾತ್ರವೆ

ಗೊತ್ತಿದೆಯೆಂದವರು ಇಲ್ಲಿ, ಉಸಿರಿದ್ದೇ ಬರಹ

ಜನಕೆ, ಲೇವಡಿ ಮಾಡದೆ, ಹೊಟ್ಟೆ ತುಂಬದು 

ದ್ವಿಪದಿಯ ತೋಚಿದಂತೆ, ತಿರುಚಿದ್ದೇ ಬರಹ

ಕಠಿಣ ಶಬ್ದ ತುರುಕಿ, ಬರೆದರೆ ಅರ್ಥವಾದೀತೆ

ಸ್ವಾರಸ್ಯವಿಲ್ಲದ ವಿಷಯದಿ, ತೇಲಿದ್ದೇ ಬರಹ

ಕವಿಯು ತನ್ನ ದೌರ್ಬಲ್ಯ ಗಮನಿಸನೇ ಈಶ

ಬೇರೆಡೆ ಹುಟ್ಟ ಪಡೆದು, ಇಲ್ಲಿ ಕಟ್ಟಿದ್ದೇ ಬರಹ

-ಹಾ ಮ ಸತೀಶ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ