ಬಾಳು ಚೆಲುವಲಿ ಹೊರಳಿ ಚಂದನ
ಮನೆಯ ಸುತ್ತಲು ತೋರಣ
ತನುವಿನೊಳಗಡೆ ಖುಷಿಯ ಹೂಮನ
ಹೃದಯದಾಳದಿ ಚೆಲುವನ
ನಗುವ ಮುಖದಲಿ ಸವಿಯ ಚುಂಬನ
ನೋಟ ಬೆಸುಗೆಯ ಬಂಧನ
ಕಾಟ ಕೊಡದೆಲೆ ಪ್ರೇಮ ಬಾಗಲು
ಮಧುರ ಭಾವದ ಸ್ಪಂದನ
ಮನದ ಆಳದಿ ಪ್ರೀತಿ ಚಿಮ್ಮಲು
ಉಸಿರ ಉಸಿರಲಿ ಮೋಹನ
ಭವದ ಸುತ್ತಲು ಮೋಹ ಮೆತ್ತಲು
ಚೆಲುವ ಆಟದಿ ಮೈಮನ
ಹೀಗೆ ಬೀಗುತ ಸೊಕ್ಕಿ ಒಲುಮೆಯು
ಶಯನ ದೂರಕೆ ದೂಡುತ
ವರುಷ ಕಳೆಯಲು ಪುಟ್ಟ ಕಂದನು
ಮಡಿಲ ಸೇರುತ ನಲಿಯುತ
-ಹಾ ಮ ಸತೀಶ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!