'ಗಝಲ್ ಸಾಹಿತ್ಯ ನಿಂತ ನೀರಿನಂತಲ್ಲ, ಹರಿವ ನೀರಿನಂತಾಗಬೇಕು' - ಟಿ.ಸುಬ್ರಮಣ್ಯ ಭಟ್ಟ. 

'ಗಝಲ್' ಇದು ಆರೇಬಿಯಾ ಪಾರ್ಸಿ ಅಲ್ಲಿಂದ ಭಾರತಕ್ಕೆ ಸುಮಾರು ಏಳುನೂರು ವರ್ಷಗಳಿಂದ ಬಂದ ಸಾಹಿತ್ಯ ಎಪ್ಪತ್ತು ವರ್ಷಗಳಿಂದ ಇತ್ತಿಚೇಗೆ ಕರ್ನಾಟಕಕ್ಕೆ ಕಾಲಿಟ್ಟು ಈಗ ಬಹಳಷ್ಟು ಬೆಳೆದು ಜನರ ಮನದಲ್ಲಿ ಸ್ಥಾನವನ್ನು ಪಡೆದಿದೆಯೆಂದು ಸಮಾರಂಭದ ಉದ್ಘಾಟಕರಾಗಿ ಬಂದಿದ್ದ ವಿದ್ವಾನ್ ಟಿ.ಸುಬ್ರಮಣ್ಯ ಭಟ್ಟ ಇವರು ದೀಪ ಬೆಳಗಿಸಿ ಮಾತನಾಡಿದರು. ಇವರು ತಾವರೆಕೆರೆಯ ದೂರ ಸಂಪರ್ಕ ನಗರದ ಸಮುದಾಯ ಭವನದ ಸಭಾಂಗಣದಲ್ಲಿ ಕವಿ ಹಾ ಮ ಸತೀಶರ 'ಚಿಗರೆ' ಗಜಲ್ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಈ ಮಾತನ್ನಾಡಿದರು.

'ಚಿಗರೆ' ಗಝಲ್ ಸಂಕಲನವನ್ನು ಬಿಡುಗಡೆಗೊಳಿಸಿದ ಖ್ಯಾತ ಬಹು ಭಾಷಾ ಕವಿಗಳಾದ ಮಂಗಳೂರಿನ ಮೊಹಮ್ಮದ್ ಬಡ್ಡೂರು ಇವರು ಗಝಲ್‌ನ ವಿವಿಧ ಮಜಲುಗಳನ್ನು ನೆರೆದಿದ್ದವರಿಗೆ ಪರಿಚಯಿಸುತ್ತಾ 'ಚಿಗರೆ' ಗಝಲ್ ಸಂಕಲನ ಇತರೆ ಗಝಲ್ ಸಂಕಲನಗಳಿಗೆ ಹೇಗೆ ಮಾದರಿ ಆಗುತ್ತದೆ ಎಂಬುದನ್ನು ವಿವರಿಸುತ್ತಾ, ಕೆಲವೊಂದು ಉದಾಹರಣೆಗಳನ್ನು ಕೊಟ್ಟು, ಸಮಗ್ರ ವಿವರಣೆ ನೀಡಿದರು.

WhatsApp Image 2026-10-26 at 2.35.38 PM.jpeg

ಕನ್ನಡ 'ಭಾವತರಂಗ ಸಾಹಿತ್ಯ ಸಂಘ, ತಾವರೆಕೆರೆ ಈ ವರ್ಷ ಕೂಡ ಮಾಡಿದ 'ಕರಾವಳಿ ರತ್ನ' ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಕವಿಗಳ ಒಳ ಮನಸ್ಸು ತುಂಬಿದ ಕೊಡದಂತೆ ಇರಬೇಕೆಂದು ಮುಖ್ಯ ಅತಿಥಿ ಸ್ಥಾನದಿಂದ ಬಂಟ್ವಾಳದ ಖ್ಯಾತ ರಂಗಕರ್ಮಿ ಬಿ.ಆರ್.ಕಬಕರವರು ಮಾತನಾಡಿದರು.

ಗಝಲ್ ಸಾಹಿತ್ಯದ ಬಗ್ಗೆ ಹಾಗೂ ಕೃತಿಕಾರರ ಬಗ್ಗೆ ಕರ್ನಾಟಕ ಗಝಲ್ ಅಕಾಡೆಮಿಯ ಅಧ್ಯಕ್ಷರಾದ ರಂಗಸ್ವಾಮಿ ಸಿದ್ದಯ್ಯ ತಮ್ಮ ಪ್ರಸ್ತಾವಿಕ ನುಡಿಯಲ್ಲಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗಝಲ್ ಕವಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಸಿದ್ಧರಾಮ ಹೊನ್ಕಲ್ ಶಹಾಪುರ ಇವರು ಮಾತನಾಡುತ್ತಾ, ಕವಿ ಹಾ.ಮ.ಸತೀಶರು ಸುಮಾರು ನಲವತ್ತು ವರುಷಗಳಿಂದ ಸಾಹಿತ್ಯ ಪ್ರಕಾರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದರೂ ಎಲೆಮರೆ ಕಾಯಿಯಂತೆ ಇದ್ದಾರೆ. ಹೀಗೆ ಇರಲು ಅವರ ಇಚ್ಛಾಶಕ್ತಿಯೇ ಕಾರಣ, ಸೌಮ್ಯ ಅವರ ಹೃದಯದಲ್ಲಿದೆ. ಅದನ್ನು ಅವರ ಗಝಲ್‌ಗಳಲ್ಲಿ ಕಾಣಬಹುದು. ವೈವಿಧ್ಯಮಯವಾದ 60 ಗಝಲ್‌ಗಳು ಅವರ 'ಚಿಗರೆ' ಗಝಲ್ ಸಂಕಲನದಲ್ಲಿದೆ. ಕನ್ನಡ ನಾಡಿನ ಜನರು ಅವರ ಗಝಲ್ ಸಂಕಲನವನ್ನು ಕೊಂಡು ಓದಬೇಕು ಎಂದು ಹೇಳಿದರು.

ನಂತರ ಬಂದಿರುವ ಆತಿಥಿಗಳನ್ನು ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು. ಖ್ಯಾತ ಹಿಂದೂಸ್ತಾನಿ ಗಾಯಕರಾದ ರವಿಕುಮಾರ ಅವರ ಪಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಖ್ಯಾತ ಯೂತ್ ಟ್ಯೂಬ್ ಧಾರವಾಹಿ ನಟ ನಿರ್ದೇಶಕರಾದ ಡಿ.ಆರ್.ಹರ್ಷವರ್ಧನ್ ಸ್ವಾಗತ ಮಾಡಿದರೆ. ‘ಚಿಗರೆ ‘ ಗಝಲ್ ಸಂಕಲನ ಬರೆದ ಹಾ ಮ ಸತೀಶರು ವಂದಿಸಿದರು. ನಿರೂಪಣೆಯನ್ನು ಖ್ಯಾತ ಗಝಲ್ ಕವಯತ್ರಿ ರತ್ನಾ ಕೆ.ಭಟ್ಟ ಪುತ್ತೂರು ನಿರ್ವಹಿಸಿದರು.